ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಮಾರಿಯಮ್ಮ ದೇವಸ್ಥಾನ, ಚಿತ್ರಪಾಡಿ- ಸಾಲಿಗ್ರಾಮದೇವಿಯ ಪ್ರತಿಷ್ಠಾ ವರ್ಧಂತ್ಯೋತ್ಸವವು ಬುಧವಾರ ಮತ್ತು ಗುರುವಾರದಂದು ಸಂಪನ್ನಗೊಂಡಿತು.
ಶ್ರೀ ದೇಗುಲದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಬುಧವಾರ ದೇವತಾ ಪ್ರಾರ್ಥನೆ, ಪುಣ್ಯಾಹ, ಬ್ರಹ್ಮಕಲಶ ಸ್ಥಾಪನೆ, ಕಲಾಹೋಮ, ಕಲಶಾಭಿಷೇಕ, ಮಹಾಪೂಜೆ ,ವಸಂತ ಪೂಜೆ, ಪ್ರಸಾದ ವಿತರಣೆ ಗುರುವಾರ ಮಹಾಪೂಜೆ, ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಿದವು.
ಧಾರ್ಮಿಕ ವಿಧಿವಿಧಾನಗಳನ್ನು ದೇಗುಲದ ತಂತ್ರಿ ಕೃಷ್ಣ ಸೋಮಯಾಜಿ ನೇತ್ರತ್ವದಲ್ಲಿ ದೇಗುಲದ ಪ್ರದಾನ ಅರ್ಚಕ ಸುಧೀರ್ ಐತಾಳ್ ಸಮ್ಮುಖದಲ್ಲಿ ಜರಗಿದವು.
ದೇಗುಲದ ಅಧ್ಯಕ್ಷ ಆನಂದ್ ಗಾಣಿಗ ದಂಪತಿಗಳು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು. ಸಾಂಸ್ಕoತಿಕ ಕಾರ್ಯಕ್ರಮದ ಅಂಗವಾಗಿ ಬುಧವಾರ ಶ್ರೀ ಮಾರಿಯಮ್ಮ ಮಹಿಳಾ ಭಜನಾ ಮಂಡಳಿ ಚಿತ್ರಪಾಡಿ ಶ್ರೀರಾಮ ಮಹಿಳಾ ಭಜನಾ ಸಂಘ ಸಾಲಿಗ್ರಾಮ, ಶ್ರೀ ನಂದಿಕೇಶ್ವರ ಭಜನಾ ಮಂಡಳಿ, ಚಿತ್ರಪಾಡಿ ಇವರಿಂದ ಕುಣಿತ ಭಜನೆ ನಡೆಯಿತು.
ಪೂರ್ವಾಹ್ನ ವಿಪ್ರ ಮಹಿಳಾ ಸಾಲಿಗ್ರಾಮ ವಲಯ ಇವರಿಂದ ಲಲಿತಾ ಸಹಸ್ರನಾಮ ಪಠಣ, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಬಳಗ ಕೋಟ ಇವರಿಂದ ಚಂಡೆವಾದನ, ರಾತ್ರಿ ಚಿತ್ರಪಾಡಿ ಗ್ರಾಮದ ಚಿಣ್ಣರಿಂದ ಇವರಿಂದ ನೃತ್ಯ ಸಿಂಚನ, ಶ್ರೀ ಈಶ್ವರಿ ಮಾರಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಕಳವಾಡಿ ಮಾರಿಕಾಂಬಾ ಕ್ಷೇತ್ರ ಮಹಾತ್ಮೆ ಪ್ರದರ್ಶನ ಜರಗಿತು.
ದೇಗುಲದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕಾರ್ಯದರ್ಶಿ ನಾಗೇಂದ್ರ ಆಚಾರ್, ಕೋಶಾಧಿಕಾರಿ ಉದಯ್ ಗಾಣಿಗ, ಸಮಿತಿಯ ಪದಾಧಿಕಾರಿಗಳು ಮತ್ತಿತರರು ಇದ್ದರು.

