Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ಹಿರಿಯ ನಾಗರಿಕರ ಆರೋಗ್ಯ ಪಾಲನೆ ಮತ್ತು ಮಾನಸಿಕ ನೆಮ್ಮದಿ ಉಪನ್ಯಾಸ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಹಿರಿಯ ನಾಗರಿಕರ ವೇದಿಕೆ ಕೋಟ ಗಿಳಿಯಾರು ಮಾಸಿಕ ಸಭೆಯಲ್ಲಿ ಹಿರಿಯ ನಾಗರಿಕರ ಆರೋಗ್ಯ ಪಾಲನೆ ಮತ್ತು ಮಾನಸಿಕ ನೆಮ್ಮದಿ ಕುರಿತು ಉಪನ್ಯಾಸ ಕಾರ್ಯಕ್ರಮ ಮೂಡುಗಿಳಿಯಾರಿನ ಅಲ್ಸೆಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.

ವೇದಿಕೆ ಅಧ್ಯಕ್ಷ ಹಂದಕುಂದ ಸೋಮಶೇಖರ ಶೆಟ್ಟಿ ಗಿಳಿಯಾರು ಅಧ್ಯಕ್ಷತೆ ವಹಿಸಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಕುರಿತು ಮಾಹಿತಿ ನೀಡಿದರು. ಉಡುಪಿ ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ಖ್ಯಾತ ಮನೋರೋಗ ತಜ್ಞರಾದ ಡಾ| ವಿರೂಪಾಕ್ಷ ದೇವರುಮನೆ ಹಿರಿಯ ನಾಗರಿಕರ ಸ್ವಸ್ತ ಜೀವನ ಸದೃಢ ಆರೋಗ್ಯದ ಬಗ್ಗೆ ಮಾನಸಿಕ ನೆಮ್ಮದಿಯ ಕುರಿತು ಸರಳ ವ್ಯಾಯಾಮದ ಬಗ್ಗೆ ವಿಚಾರಗೋಷ್ಠಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಹೊಸತಾಗಿ ಸೇರ್ಪಡೆಗೊಂಡ ಸದಸ್ಯರಾದ ಗೋಪಾಲ ಕೃಷ್ಣ ಜೋಗಿ, ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ತಿಮ್ಮ ಪೂಜಾರಿ, ನಿವೃತ್ತ ಉಪನ್ಯಾಸಕ ಶ್ರೀಪತಿ ಜೋಗಿ ಅವರನ್ನು ಮುಖ್ಯ ಅತಿಥಿ ವಿರೂಪಾಕ್ಷ ದೇವರುಮನೆ ಗೌರವಿಸಿದರು. ಹುಟ್ಟುಹಬ್ಬ ಆಚರಿಸಿಕೊಂಡ ಜಿ. ಸರಸ್ವತಿಯಮ್ಮ, ಸುಬ್ರಹ್ಮಣ್ಯ ಹೇರ್ಳೆ, ಸುಶೀಲ ಶೆಟ್ಟಿ, ಶಶಿಕಲಾ ಭಟ್, ಕೃಷ್ಣಮೂರ್ತೀ ಮರಕಾಲ, ಎಂ. ಭಾಸ್ಕರ ಶೆಟ್ಟಿ ಅವರನ್ನು ಅಧ್ಯಕ್ಷರು ಅಭಿನಂದಿಸಿದರು. ಕಾರ್ಯದರ್ಶಿ ಶಂಕರ ಆಚಾರ್ ವರದಿ ವಾಚಿಸಿ, ನಿರೂಪಿಸಿ, ವಂದಿಸಿದರು.

Exit mobile version