Kundapra.com ಕುಂದಾಪ್ರ ಡಾಟ್ ಕಾಂ

ಹರ್ತಟ್ಟು ಯುವಕ ಮಂಡಲದ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ, ಅದ್ದೂರಿ ಯಕ್ಷರಾತ್ರಿ ಬಪ್ಪನಾಡು ಕ್ಷೇತ್ರಮಹಾತ್ಮೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಹರ್ತಟ್ಟು ಯುವಕ ಮಂಡಲ ಕೋಟ 6ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಕೋಟ ಸಿ.ಎ. ಬ್ಯಾಂಕ್ ಹಿಂಭಾಗ ಪ್ರದೇಶದಲ್ಲಿ ಬುಧವಾರ ವೇ.ಮೂ ಜನಾರ್ದನ ಅಡಿಗ ಸಾಲಿಗ್ರಾಮ ಮತ್ತು ಮಿಥುನ್ ಅಡಿಗ ಅವರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶ್ರೀ ಲಕ್ಷ್ಮೀ ನಾರಾಯಣ ಹೃದಯ ಹೋಮ ಸತ್ಯನಾರಾಯಣ ಕಥಾಶ್ರವಣ ಸಂಪನ್ನಗೊಂಡಿತು.

ಈ ಹಿನ್ನಲ್ಲೆಯಲ್ಲಿ ಸಾವಿರಾರು ಜನ ಅನ್ನಸಂತರ್ಪಣೆಯಲ್ಲಿ ಭಾಗಿಯಾದರಲ್ಲದೆ ರಾತ್ರಿ ನಡೆದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಗಾನ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಪಾವಂಜೆ ಮೇಳದವರಿಂದ ಅದ್ಧೂರಿಯ ಯಕ್ಷಗಾನ ಬಪ್ಪನಾಡು ಕ್ಷೇತ್ರ ಮಹಾತ್ಮ ಯಕ್ಷಗಾನ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಅಪರಾಹ್ನ  ರಾಮಾಮೃತ ಭಗವತ್ ಭಜನಾ ಮಂಡಳಿ ಕೋಟ ರಾಮ ಸಂಕೀರ್ತನೆ, ರಾತ್ರಿ ಪಟ್ಲ ಫೌಂಡೇಶನ್ ಪ್ರವರ್ತಕ ಪಟ್ಲ ಸತೀಶ್ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಮಹೇಂದ್ರ ಪೂಜಾರಿ, ಪ್ರಮುಖರಾದ ಕೀರ್ತಿಶ ಪೂಜಾರಿ, ತಿಮ್ಮ ಕಾಂಚನ್ ಸೇರಿದಂತೆ ಅನೇಕರು ಭಾಗಿಯಾದರು.

Exit mobile version