Kundapra.com ಕುಂದಾಪ್ರ ಡಾಟ್ ಕಾಂ

ಮಣೂರು ಮಹಾಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಸ್ವಚ್ಛತಾ ಕಾರ್ಯ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಮಣೂರು ಹೇರಂಬ ಮಹಾಗಣಪತಿ ಹಾಗೂ ಮಹಾಲಿಂಗೇಶ್ವರ ಸಾನಿಧ್ಯ ಕಾರಣಿಕ ಕ್ಷೇತ್ರವಾಗಿದ್ದು ಇಲ್ಲಿನ ವಾರ್ಷಿಕ ರಥೋತ್ಸವ ಅರ್ಥಪೂರ್ಣವಾಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಭಾಗವಹಿಸುವಿಕೆ ಬಹುಮುಖ್ಯವಾಗಿದೆ ಎಂದು ಮಣೂರು ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಹೇಳಿದರು.

ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ 295ನೇ ವಾರದ ಪರಿಸರಸ್ನೇಹಿ ಕಾರ್ಯಕ್ರಮದ ಸಲುವಾಗಿ ಮಣೂರು ದೇಗುಲ ಜಾತ್ರೆಯ ಪ್ರಯುಕ್ತ ಮಣೂರು ಫ್ರೆಂಡ್ಸ್ ಮಣೂರು ಇವರ ಸಂಯೋಜನೆಯೊಂದಿಗೆ ದೇಗುಲ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಗುಲ ಸ್ವಚ್ಛತೆಯಿಂದ ಮನಸ್ಸು ಭಕ್ತಿಭಾವಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಇಲ್ಲಿನ ಈ ಸಂಘಟನೆಗಳ ದೇಗುಲ ಸ್ವಚ್ಛತಾ ಕಾರ್ಯಕ್ರಮ ನಿರ್ದಶನವಾಗಿದೆ ಎಂದು ಎಪ್ರಿಲ್ 2 ರಂದು ನಡೆಯುವ ಜಾತ್ರೆಯನ್ನು ಯಶಸ್ವಿಗೊಳಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಂಚವರ್ಣದ ಅಧ್ಯಕ್ಷ ಮನೋಹರ್ ಪೂಜಾರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ರಾಘವೇಂದ್ರ ಪೂಜಾರಿ, ಪಂಚವರ್ಣ ಮಹಿಳಾ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ, ಮಣೂರು ಫ್ರೆಂಡ್ಸ್ ಗೌರವಾಧ್ಯಕ್ಷ ಸುರೇಶ್ ಆಚಾರ್ ಮತ್ತಿತರರು ಇದ್ದರು.

Exit mobile version