ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷ ಕಾಂತಾರ ಹಾಗೂ ಯಕ್ಷ ಬ್ರಹ್ಮಶ್ರೀ ಇವರ ಸಂಯೋಜನೆಯಲ್ಲಿ ಅಶಕ್ತರ ಹಾಗೂ ಅನಾರೋಗ್ಯ ಪೀಡಿತರ ಸಹಾಯಾರ್ಥವಾಗಿ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ದಿಸೆಯಲ್ಲಿ ಸೋಮವಾರ ಕಾರ್ಕಡದ ಭಟ್ರಕಟ್ಟೆಯ ಬಡ ಕುಟುಂಬದ ಜ್ಯೋತಿ ವಿಕ್ಟೋರಿಯಾ ಡಿಸಿಲ್ವಾ ಹಾಗೂ ಕಾರ್ಕಡದ ಅನಾರೋಗ್ಯಕ್ಕೆ ತುತ್ತಾದ ದಿನೇಶ್ ಕಾರ್ಕಡ ಇರ್ವರಿಗೆ ಒಟ್ಟು 50,000 ರೂ.ಗಳ ನೆರವಿನ ಸಹಾಯಹಸ್ತ ನೀಡಲಾಯಿತು.

ಈ ಸಂದರ್ಭದಲ್ಲಿ ಯಕ್ಷ ಕಾಂತಾರ ಹಾಗೂ ಯಕ್ಷ ಬ್ರಹ್ಮಶ್ರೀ ಸಮಿತಿಯ ಮುಖ್ಯಸ್ಥ ಕೃಷ್ಣಮೂರ್ತಿ ಮರಕಾಲ, ಶ್ರೀನಿವಾಸ ಕಾರ್ಕಡ, ಸಂತೋಷ್ ಕೆ., ಶಶಿಧರ ಕೆ., ಶಶಿರ ಕೆ., ರಮೇಶ್ ಕೆ., ಧರ್ಮಸ್ಥಳ ಗ್ರಾ. ಯೋಜನಾಧಿಕಾರಿ ರಮೇಶ್ ಪಿ.ಕೆ., ಯಕ್ಷಕಾಂತಾರ ತಂಡದ ಸತೀಶ್ ಕೆ., ಸುಧೀರ್ ನೈಲಾಡಿ ಉಪಸ್ಥಿತರಿದ್ದರು.
ಈ ಹಿನ್ನಲ್ಲೆಯಲ್ಲಿ ಶನಿವಾರ ಹಮ್ಮಿಕೊಂಡ ಶ್ರೀ ಮಹಿಷಮರ್ದಿನಿ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ಶ್ರೀ ಕ್ಷೇತ್ರ ನೀಲಾವರ ಇವರಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕ್ಷೇತ್ರ ಮಹಾತ್ಮಯ ಸರದಾರ ಜ್ಯೋತಿಷ್ಯ ಹಾಗೂ ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್ ವಿರಚಿತ ನೀಲಾವರ ಕಲ್ಲುರಾಶಿ ಕಲ್ಕುಡ ಮಹಾತ್ಮ,ಕರಾವಳಿ ದೈವದ ಮಹಿಮೆ ಆಧಾರಿತ ಕಥಾನಕವನ್ನು ನ್ಯೂ ಕಾರ್ಕಡ ಶಾಲಾ ಮೈದಾನದಲ್ಲಿ ನಡೆಸಲಾಯಿತು.