Kundapra.com ಕುಂದಾಪ್ರ ಡಾಟ್ ಕಾಂ

ಕರಾವಳಿ ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾಟ ಪೋಸ್ಟರ್ ಬಿಡುಗಡೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಕೋಟತಟ್ಟುವಿನ ಕರಾವಳಿ ಫ್ರೆಂಡ್ಸ್ ಆಶ್ರಯದಲ್ಲಿ ಐದನೇ ಬಾರಿಗೆ ಲೀಗ್ ಮಾದರಿಯ 90ಗಜಗಳ ಕ್ರಿಕೆಟ್ ಪಂದ್ಯಾಕೂಟ ಕೆ.ಪಿ ಎಲ್ 2026 ಇದೇ ಬರುವ ಎಪ್ರಿಲ್ 19ರಂದು ಕರಾವಳಿ ಮೈದಾನ ಕೋಟತಟ್ಟು ಇಲ್ಲಿ ಆಯೋಜಿಸಿದೆ ಇದರ ಪೋಸ್ಟರನ್ನು ಕೋಟ ಅಮೃತೇಶ್ವರೀ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಕೋಟತಟ್ಟು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಸತೀಶ್ ಕುಂದರ್, ಕೋಟ ಸಿ.ಎ. ಬ್ಯಾಂಕ್ ನಿರ್ದೇಶಕ ರಂಜೀತ್ ಕುಮಾರ್, ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಕರಾವಳಿ ಫ್ರೆಂಡ್ಸ್ ರೋಹಿತ್, ರಂಜೀತ್, ಸಂತೋಷ್, ರತ್ನಾಕರ್ ಬಾರಿಕೆರೆ, ವಿಜಯ್ ಪೂಜಾರಿ, ಅವಿನಾಶ್ ಮರಕಾಲ, ಪವನ್ ಕುಂದರ್, ಅಶೋಕ್ ಪಡುಕರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Exit mobile version