Site icon Kundapra.com ಕುಂದಾಪ್ರ ಡಾಟ್ ಕಾಂ

ಮಣೂರು ಮಹಾಲಿಂಗೇಶ್ವರ ಜಾತ್ರೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಮಣೂರು ಮಹಾಲಿಂಗೇಶ್ವರ ಹಾಗೂ ಹೇರಂಬ ಮಹಾಗಣಪತಿ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಮಾ. 30ರಿಂದ ಎಪ್ರಿಲ್ 4ರ ವರೆಗೆ ನಡೆಯುವ ಜಾತ್ರೋತ್ಸವದ ವೈಭವವನ್ನು ಬೆಂಗಳೂರು ಉದ್ಯಮಿ ಸೀತಾರಾಮ ಹೊಳ್ಳ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್, ದೇಗುಲದ ಟ್ರಸ್ಟಿ ಅಶೋಕ್ ಶೆಟ್ಟಿ ಕೊಯ್ಕೂರು, ಸ್ಥಳೀಯ ಉದ್ಯಮಿ ನವೀನ್ ಶೆಟ್ಟಿ ನಡುಬೆಟ್ಟು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗೋಪಾಲಕೃಷ್ಣ ಮಯ್ಯ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಛಾಯಾ ತರಂಗಿಣಿ ಸಂಗೀತ ಶಾಲೆ ಇವರಿಂದ ಛಾಯಾ ತರಂಗಿಣಿ  ಕಲಾಮಂಜರಿ, ಸ್ನೇಹಕೂಟ ಮಣೂರು ಇವರಿಂದ ಹಬ್ಬದೊಳಗೊಂದು ಹಬ್ಬ ಮತ್ತು ಯಕ್ಷಗುರು ಸೀತಾರಾಮ ಶೆಟ್ಟಿ ಕೊಯ್ಕೂರು ಇವರ ನಿರ್ದೇಶನದಲ್ಲಿ ಮಣೂರು ಮಹಾಲಿಂಗೇಶ್ವರ ಯಕ್ಷಗಾನ‌ ಮಂಡಳಿಯ ಬಾಲ ಯಕ್ಷಕಲಾವಿದರಿಂದ ಚಕ್ರವರ್ತಿ ಬಲಿ ಎಂಬ ಯಕ್ಷಪ್ರದರ್ಶನಗೊಂಡಿತು.

Exit mobile version