ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯಕ್ಷೇತ್ರದ ಆಚಾರ್ಯ ಕುಟುಂಬಸ್ಥರ ಜಟ್ಟಿಗ ಮತ್ತು ಹೈಗುಳ್ಳಿ ದೇವಸ್ಥಾನ ಮುಂಭಾಗ ಕಳೆದ ವರ್ಷ ಬಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಬಿದ್ದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಶೌರ್ಯ ಟೀಮ್ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಬಿದ್ದಿರುವ ಬಾರಿ ಗಾತ್ರದ ಮರವನ್ನು ತೆರವುಗೊಳಿಸಿ ದೈವಸ್ಥಾನದ ದಾರಿ ಸುಗಮಗೊಳಿಸಿದ ಹಿನ್ನಲ್ಲೆಯಲ್ಲಿ ಸೋಮವಾರ ದೇವಸ್ಥಾನದ ಜೀರ್ಣೋದ್ಧಾರ ಪುನ: ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಶೌರ್ಯ ಟೀಮಿನ ಸದಸ್ಯರಿಗೆ ಶಾಲನ್ನು ಹೊಂದಿಸಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗುಂಡ್ಮಿ ಒಕ್ಕೂಟದ ಕಾರ್ಯದರ್ಶಿಯಾದ ಶೇಖರ್ ಪೂಜಾರಿ, ವಲಯದ ಮೇಲ್ವಿಚಾರಕಿ ಜಯಲಕ್ಷ್ಮಿ, ಶೌರ್ಯ ಟೀಮ್ ಅಧ್ಯಕ್ಷ ಲಕ್ಷ್ಮೀಶ ಆಚಾರ್ಯ, ಘಟಕದ ಸೇವಾ ಪ್ರತಿನಿಧಿ ಶೋಭಾ, ಸ್ಥಳೀಯ ಸೇವಾ ಪ್ರತಿನಿಧಿ ಶಶಿಕಲಾ, ಶೌರ್ಯ ಟೀಮ್‌ನ ಸದಸ್ಯರಾದ ಕಾಳಿಂಗ ಪೂಜಾರಿ, ರವಿ ಪೂಜಾರಿ, ಸತೀಶ, ರೇಣುಕಾ, ಯಶೋಧ, ವಿಜಯಶ್ರೀ, ಆಚಾರ್ಯ ಕುಟುಂಬಸ್ಥರು, ತಂಡದ ಸದಸ್ಯರು ಉಪಸ್ಥಿತರಿದ್ದರು.