ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ಇವರು ನಡೆಸಿದ ಆರೋಗ್ಯ ಮಾಹಿತಿ ವಿಶೇಷ ಕಾರ್ಯಕ್ರಮ ಇತ್ತೀಚಿಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಖ್ಯಾತ ಮಧುಮೇಹ ತಜ್ಞೆ ,ಯೋಗ ಪಟು, ಸಂಗೀತ ನೃತ್ಯ ಕಲಾವಿದೆ, ಬಿಗ್ ಮೆಡಿಕಲ್ ಸೆಂಟರ್ ಉಡುಪಿ ಇಲ್ಲಿನ ಪ್ರಸಿದ್ಧ ವೈದ್ಯ ಡಾ. ಶೃತಿ ಬಲ್ಲಾಳ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಮಧುಮೇಹದ ಬಗ್ಗೆ ಉತ್ತಮ ಮಾಹಿತಿ ವಿಚಾರ -ಆಹಾರ- ವಿಹಾರ ಮತ್ತು ಸಮಸ್ಯೆಗಳ ಕುರಿತಾದ ವಿಷಯ ಗಳನ್ನು ಚಿತ್ರ ಮಾಧ್ಯಮದ ಸಹಿತವಾಗಿ ವಿವರಿಸಿದರು. ಜನರೊಂದಿಗೆ ಸಂವಾದ ಕಾರ್ಯಕ್ರಮವನ್ನು ಸುಮಾರು ಒಂದುವರೆ ಗಂಟೆಗಳ ಕಾಲ ಅದ್ಭುತವಾಗಿ ನಡೆಸಿಕೊಟ್ಟರು. ಜನಅರ ಪ್ರತಿಕ್ರಿಯೆ ಸಂಶಯ ಪ್ರಶ್ನೋತ್ತರಗಳಿಗೆ ಸಮರ್ಪಕವಾಗಿ ಉತ್ತರಿಸಿದರು.
ಸಮಾರಂಭದಲ್ಲಿ ಮಹಿಳಾ ವೇದಿಕೆಯ ಪರವಾಗಿ ಶೃತಿ ಬಲ್ಲಾಳರನ್ನು ಗೌರವಿಸಿದರು. ವೇದಿಕೆಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ ತುಂಗ ಕಾರ್ಯದರ್ಶಿ ಲತಾ ಹೊಳ್ಳ ಮತ್ತು ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ ಸಿ. ಹೊಳ್ಳ ಸ್ವಾಗತಿಸಿದರು. ಸುಜಾತ ಬಾಯರಿ ವಂದಿಸಿ, ಗೀತಾ ಅಧಿಕಾರಿ ನಿರೂಪಿಸಿದರು.