ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ಸಾಲಿಗ್ರಾಮ ಇದರ ಮಹಿಳಾ ವೇದಿಕೆಯ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ವಿಶೇಷ ಕಾರ್ಯಕ್ರಮಗಳು ಇತ್ತೀಚಿಗೆ ಗುರುನರಸಿಂಹ ದೇವಸ್ಥಾನದ ಕೂಟ ಬಂದು ಭವನದಲ್ಲಿ ಇತ್ತೀಚಿಗೆ ನಡೆಯಿತು.
ಹಿರಿಯ ವಯಸ್ಕ ಕ್ರಿಯಾಶೀಲ 10 ಮಹಿಳೆಯರಾದ ಜಾನಕಿ ಐತಾಳ, ವಸಂತಿ ಹೊಳ್ಳ ಗುಂಡ್ಮಿ, ಯಶೋದ ಹಂದೆ, ವಿಮಲಾ ಐತಾಳ ಹಂದೊಟ್ಟು, ಯಶೋದ ಹೆಬ್ಬಾರ ಐರೋಡಿ, ಜಯಲಕ್ಷ್ಮಿ ಐತಾಳ, ವಾಗ್ದೇವಿ ಹೊಳ್ಳ, ಪ್ರಮೀಳಾ ಹೊಳ್ಳ, ಸರೋಜಾ ಹೊಳ್ಳ ಕಾರ್ಕಡ, ಸುಲೋಚನಾ ಉಪಾಧ್ಯ ಮಂಟಪ ಅವರನ್ನು ಗೌರವಿಸಲಾಯಿತು.

ಪಾರಂಪಳ್ಳಿಯ ಡಾ. ಅನನ್ಯಾ ಪಿ.ಆರ್. (ಗೋಲ್ಡ್ ಮೆಡಲ್ FAICO)Fellow of All India Collegium of Opthalmology ಇವರ ಹಿರಿಯ ಸಾಧನೆಗಾಗಿ ವಿಶೇಷವಾಗಿ ಅಭಿನಂದಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಉಡುಪಿಯ ಬಿಗ್ ಮೆಡಿಕಲ್ ಸೆಂಟರ್‌ನ ಖ್ಯಾತ ಮಧುಮೇಹ ತಜ್ಞೆ ಡಾ. ಶೃತಿ ಬಲ್ಲಾಳ್ ಅವರು ಸನ್ಮಾನ ಕಾರ್ಯ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ ಸಿ. ಹೊಳ್ಳ ವಹಿಸಿದ್ದು ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಜಾತ ಬಾಯರಿ, ಸುಮನ ಹೇರ್ಳೆ ಸನ್ಮಾನ ಪತ್ರ ವಾಚಿಸಿ ಪರಿಚಯಿಸಿದರು. ಉಪಾಧ್ಯಕ್ಷೆ ವಿಜಯಲಕ್ಷ್ಮಿ ತುಂಗ ವಂದನಾರ್ಪಣೆ ಮಾಡಿದರು.
ಗೀತಾ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು. ಲತಾ ಹೊಳ್ಳ ಸುಮಂಗಲಿ ನಾವಡ, ಅನುಸೂಯ ಮಯ್ಯ ಶ್ಯಾಮಲ ಐತಾಳ ಸಹಕರಿಸಿದರು. ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆಯ ಅಧ್ಯಕ್ಷ ಪಿ.ಸಿ. ಹೊಳ್ಳ, ಗುರು ನರಸಿಂಹ ದೇವಸ್ಥಾನದ ಧರ್ಮದರ್ಶಿ ಕೆ. ತಾರಾನಾಥ ಹೊಳ್ಳ, ಸ್ಥಳೀಯರಾದ ರವೀಂದ್ರ ಹೇರ್ಳೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.