Kundapra.com ಕುಂದಾಪ್ರ ಡಾಟ್ ಕಾಂ

ಕೋಟ ವರುಣತೀರ್ಥ ರಾಜಶೇಖರ ದೇವಸ್ಥಾನದ ವಾರ್ಷಿಕ ವರ್ಧಂತ್ಯುತ್ಸವ ಸಂಪನ್ನ

ಕುಂದಾಪ್ರ ಡಾಟ್‌ ಕಾಂ ಸುದ್ದಿ
ಕೋಟ:
ಇಲ್ಲಿನ ಕೋಟದ ಪೇಟೆ ದೇವಸ್ಥಾನ ಎಂದೆ ಪ್ರಸಿದ್ಧ ಪಡೆದಿರುವ ಕೋಟ ವರುಣತೀರ್ಥ ರಾಜಶೇಖರ ದೇವಸ್ಥಾನ ಇದರ ವಾರ್ಷಿಕ ವರ್ಧಂತಿ ಉತ್ಸವ ಬುಧವಾರ ಸಂಪನ್ನಗೊಂಡಿತು.

ದೇಗುಲದಲ್ಲಿ ಶತರುದ್ರಾಭಿಷೇಕ, ಕಲಶಾಭಿಷೇಕ, ಮಹಾಮಂಗಳಾರತಿ, ಸಂಜೆ ರಂಗಪೂಜೆ, ದೀಪೋತ್ಸವ , ಕೋಟ ಪಂಚವರ್ಣ ಮಹಿಳಾ ಮಂಡಳ ಭಜನಾ  ತಂಡ ಹಾಗೂ ಶಾರದ ಮಹಿಳಾ ಭಜನಾ ಮಂಡಳಿ ಕದ್ರಿಕಟ್ಟು ಇವರಿಂದ ಭಜನಾ ಕಾರ್ಯಕ್ರಮ ಜರಗಿತು.

ಧಾರ್ಮಿಕ ವಿಧಿವಿಧಾನಗಳನ್ನು ದೇಗುಲದ ಅಧ್ಯಕ್ಷ ಜಿ. ಪ್ರಭಾಕರ ಅಡಿಗರ ಸಮ್ಮಖದಲ್ಲಿ ವೇ.ಮೂ ಸುಬ್ರಹ್ಮಣ್ಯ ಅಡಿಗರ ನೇತೃತ್ವದ ಜರಗಿದವು. ಅಪರಾಹ್ನ ಅನ್ನಸಂತರ್ಪಣೆ ಭಕ್ತಾಧಿಗಳು ಭಾಗಿಯಾಗಿ ಅನ್ನಪ್ರಸಾದ ಸ್ವೀಕರಿಸಿದರು. ದೇಗುಲದ ಟ್ರಸ್ಟಿಗಳು,ಅರ್ಚಕರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version