ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಡಿ ಕನ್ಯಾಣದಲ್ಲಿ ಕೊಂಕಣಿ ಖಾರ್ವಿ ಲೋಕವೇದ್ ಕಲಾ ಮಾಂಡ್ ಬ್ರಹ್ಮಾವರ ಇದರ ಪ್ರಸ್ತುತಿಯಲ್ಲಿ ಸಮಾಜಸೇವಕ ನರಸಿಂಹ ಆರ್ಕಾಟಿ ಜೀವನ ಚರಿತ್ರೆ, ಪುಸ್ತಕ ಬಿಡುಗಡೆ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಗಮಂಟಪದಲ್ಲಿ ನೆರವೇರಿತು.
ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಹಾಗೂ ಗುರುವಂದನಾ ಸಮಿತಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಇದರ ಅಧ್ಯಕ್ಷ ಬಿ. ಮಾಧವ ಖಾರ್ವಿ ವಹಿಸಿದರು.

ಕ.ಸಾ.ಪ. ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು. ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಂಘ ಇದರ ಅಧ್ಯಕ್ಷ ರವಿ ಟಿ. ನಾಯಕ್ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನೆರವೇರಿಸಿದರು. ಪುಸ್ತಕದ ಸಂಕಲನಕಾರ ಆಲ್ಫೋನ್ಸಸ್ ಡಿಸೋಜಾ ಇವರನ್ನು ಗೌರವಿಸಲಾಯಿತು.
ಖಜಾಂಚಿ ಸದಾನಂದ ಖಾರ್ವಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್‌ನ ಕರಾವಳಿಯ ಮುತ್ಸದ್ದಿ ಹಾಗೂ ಕರಾವಳಿಯ ಗಾಂಧಿ ಎಂದು ಸಂಭೋದಿಸಲ್ಪಡುವ ಕೀರ್ತಿಶೇಷ್ಠ ನರಸಿಂಹ ಆರ್ಕಾಟಿ ಅವರ ಬಗ್ಗೆ ಸಂಸ್ಥೆ ಉದಯವಾದ ಸದುದ್ದೇಶವನ್ನು ಪ್ರಾಸ್ತಾವಿಕವಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾದ ಶಾರದಾ ರೆಸಿಡೆನ್ಸಿ ಸ್ಕೂಲ್ ಉಡುಪಿ ಪ್ರಾಂಶುಪಾಲ ಯು. ವಿದ್ಯಾವಂತ ಆಚಾರ್ಯ, ಪುಸ್ತಕದ ಸಂಕಲನಕಾರ ಆಲ್ಫೋನ್ಸಸ್ ಡಿಸೋಜಾ, ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಗೋಪಾಲ ಖಾರ್ವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರರಾವ್, ವಿಶ್ರಾಂತ ಶಿಕ್ಷಣಾಧಿಕಾರಿ ಕೆ. ಕೃ? ಮಾಸ್ಟರ್, ಆತ್ಮರಾಮ್ ಆರ್ಕಾಟ್ ದೈಹಿಕ ಶಿಕ್ಷಕ ವಿಜಯ ಕೆ ನಾಯರಿ, ಕೊಂಕಣಿ ಖಾರ್ವಿ ಲೋಕವೇದ್ ಕಲಾ ಮಾಂಡ್‌ನ ಅಧ್ಯಕ್ಷ ಕೆ ರಾಮಚಂದ್ರ ಖಾರ್ವಿ ,ನರಸಿಂಹ ಆರ್ಕಾಟಿ ಅಭಿಮಾನಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಧೀರೇಂದ್ರ ನಾಯಕ್ ಸ್ವಾಗತಿಸಿದರು. ದಿ. ಮಣೂರು ನಾರಾಯಣ ಖಾರ್ವಿ ಅವರಿಗೆ ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಮಡಿ ವಿಶ್ವನಾಥ ಖಾರ್ವಿ ವಂದಿಸಿದರು. ಪ್ರಗತಿ ಕಾರ್ಯಕ್ರಮ ನಿರೂಪಿಸಿದರು.