Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಣೂರು ಒಡಗಿನ ನಂದಿಕೇಶ್ವರ ಕೆರೆಗೆ ಕಾಯಕಲ್ಪ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಣೂರು ಒಡಗಿನ ನಂದಿಕೇಶ್ವರ ದೈವಸ್ಥಾನದ ಕೆರೆ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುಕ್ರವಾರ ಚಾಲನೆ ನೀಡಲಾಗಿದೆ.

ಸುಮಾರು 200 ಎಕ್ಕರೆ ಅಧಿಕ ವಿಸ್ತೀರ್ಣದ ಕೃಷಿ ಭೂಭಾಗ ಹೊಂದಿದ ಈ ಪ್ರದೇಶದಲ್ಲಿ ಬಹುದೊಡ್ಡ ಕೆರೆಯಾಗಿ ಗುರುತಿಸಿಕೊಂಡ ನಂದಿಕೇಶ್ವರ ದೈವಸ್ಥಾನದ ಕೆರೆ ಮಾತ್ರ ಹೂಳು ಮತ್ತು ಗಿಡಗಂಟಿಗಳಿಂದ ಹಾಸುಹೋಗಿದೆ.

ಈ ಬಗ್ಗೆ ಇಲ್ಲಿನ ಗ್ರಾಮಸ್ಥರು ಕೆಲವರ್ಷಗಳ ಹಿಂದೆ ಮರುಜೀವ ನೀಡುವ ಸಲವಾಗಿ ಹೂಳು ಮತ್ತು ಗಿಡ ಗಂಟೆಗಳನ್ನು ತೆರವುಗೊಳಿಸಿದ್ದರು ಆದರೆ ಇದೀಗ ಪುನಃ ಹೂಳು ತುಂಬಿಕೊಂಡಿದ್ದು ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ.

ಸುಮಾರು ೮೨ವರೆ ಸೆಂಟ್ಸ್ ವಿಸ್ತೀರ್ಣದ ಈ ಕೆರೆ ಗ್ರಾಮದ ಅಂತರ್ಜಲ ವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿದ್ದು ಕೆರೆ ಪುನರ್ ನವೀಕರಣದ ಶೆಕೆ ಗ್ರಾಮದ ಕೃಷಿಕರಲ್ಲಿ ಮಂದಹಾಸ ಮನೆ ಮಾಡಿದೆ.

ಕೆರೆ ಸಮಿತಿ ಮೂಲಕ ಶ್ರೀ ಕ್ಷೇತ್ರ ಅಣಿ:
ಕೆರೆ ಅಭಿವೃದ್ಧಿಗೆ ಸಮೀಪದಲ್ಲಿರುವ ದೈವಸ್ಥಾನದ ಪ್ರಮುಖರಾದ ಜಯರಾಮ ಶೆಟ್ಟಿ ಇವರನ್ನು ಅಧ್ಯಕ್ಷರಾಗಿ ನೇಮಿಸಿದ್ದು ಸ್ಥಳೀಯ ಗ್ರಾಮಸ್ಥರ ಸಹಭಾಗಿತ್ವದಡಿ ಹೂಳು ಮುಕ್ತ ಸುಸಜ್ಜಿತ ಕೆರೆಗೆ ಪಣತೊಟ್ಟಿದ್ದಾರೆ.

ಕೆರೆ ಉಳಿಸಿಕೊಳ್ಳಲು ಗ್ರಾಮಸ್ಥರ ಸಹಕಾರ:
ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಕೆರೆಗಳು ನಶಿಸಿಹೋಗುತ್ತಿರುವ ಕಾಲಘಟ್ಟದಲ್ಲಿ ಇಲ್ಲಿನ ಮಣೂರು ಭಾಗದ ಗ್ರಾಮಸ್ಥರು ಕೆರೆ ಅಭಿವೃದ್ಧಿಗೊಳಿಸಲು ಶ್ರೀ ಕ್ಷೇತ್ರದೊಂದಿಗೆ ಕೈಜೋಡಿಸಲು ಅಣಿಯಾಗಿದ್ದಾರೆ.

ನಮ್ಮೂರು ನಮ್ಮ ಕೆರೆಗೆ ಚಾಲನೆ:
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ನೇತೃತ್ವದಲ್ಲಿ ಕೋಟ ಗ್ರಾಮಪಂಚಾಯತ್, ಕೆರೆ ಅಭಿವೃದ್ಧಿ ಸಮಿತಿಯ ಸಹಭಾಗಿತ್ವದಡಿ ನಮ್ಮೂರು ನಮ್ಮ ಕೆರೆ ಯೋಜನೆಗೆ ಶುಕ್ರವಾರ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಚಾಲನೆ ನೀಡಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ನಮ್ಮೂರು ನಮ್ಮ ಕೆರೆ ಶ್ರೀಕ್ಷೇತ್ರದ ಕಾವಂದರ ಕನಸಿನ ಯೋಜನೆಯಾಗಿದ್ದು ಕಳೆದ ಹತ್ತು ವರ್ಷಗಳಿಂದ ರಾಜ್ಯಾದ್ಯಂತ ಬರಗಾಲದ ಸನ್ನಿವೇಶ ನೀರಿನ ಮಹತ್ವಗಳನ್ನರಿತು ಈ ಯೋಜನೆ ಜಾರಿಗೊಳಿಸಿದ್ದಾರೆ,ಈಗಾಗಲೇ ೯೮೦ಕ್ಕೂಮಿಕ್ಕಿ ಕೆರೆಗಳಿಗೆ ಜೀವ ತುಂಬಲಾಗಿದೆ ಎಂದರಲ್ಲದೆ ಕೆರೆಗಳನ್ನು ಸಂರಕ್ಷಿಸುವಂತೆ ಕರೆನೀಡಿ ನಂದಿಕೇಶ್ವರ ಕೆರೆಗೆ ಗ್ರಾಮಸ್ಥರ ಸಹಕಾರದೊಂದಿಗೆ ಮರುಜೀವ ನೀಡಲಿದ್ದೇವೆ ಎಂದರು.

ಈ ಕಾರ್ಯಕ್ರಮದಲ್ಲಿ ದೈವಸ್ಥಾನದ ಪಾತ್ರಿಗಳಾದ ಪ್ರಕಾಶ್ ಶೆಟ್ಟಿ, ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ನಿರ್ದೇಶಕರಾದ ತಿಮ್ಮ ಪೂಜಾರಿ, ಮಹೇಶ್ ಶೆಟ್ಟಿ, ಬ್ಯಾಂಕ್ ನ ಸಿಇಓ ಶರತ್ ಕುಮಾರ್ ಶೆಟ್ಟಿ, ಕೆರೆ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ, ಉಪಾಧ್ಯಕ್ಷ ಸರ್ವೋತ್ತಮ ಹೆಬ್ಬಾರ್, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಮೇಶ್ ಪಿ.ಕೆ, ಕೋಟ ಗ್ರಾಮಪಂಚಾಯತ್ ಕಾರ್ಯದರ್ಶಿ ಜಲಜಾಕ್ಷಿ, ಗ್ರಾಮಾಭಿವೃದ್ಧಿ ಯೋಜನೆಯ ಮಣೂರು ಒಕ್ಕೂಟದ ಅಧ್ಯಕ್ಷ ದಿನೇಶ್ ಆಚಾರ್,ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ,ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.

ಕೋಟ ವಲಯ ಮೇಲ್ವಿಚಾರಕ ನಾಗೇಶ್ ಸ್ವಾಗತಿಸಿದರು. ಯೋಜನೆಯ ತಾಲೂಕಿನ ಕೃಷಿ ಅಧಿಕಾರಿ ರಾಘವೇಂದ್ರ ನಿರೂಪಿಸಿದರು.

Exit mobile version