Site icon Kundapra.com ಕುಂದಾಪ್ರ ಡಾಟ್ ಕಾಂ

ಆನಂದ ಸಿ ಕುಂದರ್ ಅವರ 78ನೇ ಹುಟ್ಟುಹಬ್ಬದ ಅಂಗವಾಗಿ ʼಆನಂದದ ಸೃಷ್ಟಿ’ 99ನೇ ಸ್ವಚ್ಛತಾ ಅಭಿಯಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಆನಂದ ಸಿ. ಕುಂದರ್ ಅವರ 78ನೇ ಹುಟ್ಟುಹಬ್ಬದ ಅಂಗವಾಗಿ “ಆನಂದದ ಸೃಷ್ಟಿ” ತಂಡದ ವತಿಯಿಂದ 99ನೇ ವಾರದ ಅಂಗವಾಗಿ ಮೀನುಗಾರಿಕಾ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ಭಾನುವಾರ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಜನತಾ ಪರಿವಾರ ಸದಸ್ಯರುಗಳಾದ ಆನಂದ ಸಿ. ಕುಂದರ್, ಪ್ರಶಾಂತ್ ಎ. ಕುಂದರ್, ರಕ್ಷಿತ್ ಎ ಕುಂದರ್ ಹಾಗೂ ದಿವ್ಯಾಲಕ್ಷ್ಮಿ ಪ್ರಶಾಂತ್ ಕುಂದರ್, ಜನತಾ ಫಿಷ್ ನೆಟ್‌ನ ಅರುಣ್, ತೋಳಾರ್ ಓಶಿಯನ್ ಪ್ರಾಡಕ್ಟ್‌ನ ಶೇಖರ್ ಮತ್ತು ಕರಾವಳಿ  ಓಶಿಯನ್ ಪ್ರಾಡಕ್ಟ್‌ನ ಜಗನ್ನಾಥ ಕಾಂಚನ್ ಉಪಸ್ಥಿತರಿದ್ದರು.

ಜನತಾ ಫಿಶ್ ಮೀಲ್, ಜನತಾ ಫಿಶ್ ನೆಟ್, ತೋಳಾರ್ ಓಷಿಯಾನ್ ಪ್ರಾಡಕ್ಟ್ಸ್, ಕಾರವಳಿ  ಓಶಿಯನ್ ಪ್ರಾಡಕ್ಟ್‌ನ ಸುಮಾರು 180 ಅಧಿಕ ಸ್ವಯಂಸೇವಕರು 145 ಚೀಲದಷ್ಟು ಕಸವನ್ನು ಸಂಗ್ರಹಿಸಿ ಸೂಕ್ತ ವಿಲೇವಾರಿಗಾಗಿ ಕೋಟತಟ್ಟು ಎಸ್‌ಎಲ್‌ಆರ್‌ಎಮ್ ಘಟಕಕ್ಕೆ ಹಸ್ತಾಂತರಿಸಿದರು.

ಸ್ವಚ್ಛತಾ ಅಭಿಯಾನವನ್ನು ಶ್ರೀನಿವಾಸ್ ಕುಂದರ್, ಮಿಥುನ್ ಕುಮಾರ್ ಸಂಯೋಜಿಸಿ ರವಿಕಿರಣ್ ಕೋಟ ಕಾರ್ಯಕ್ರಮ ನಿರೂಪಿಸಿದರು.

Exit mobile version