Kundapra.com ಕುಂದಾಪ್ರ ಡಾಟ್ ಕಾಂ

ಡಾ. ವಾದಿರಾಜ್ ವೈದ್ಯಕೀಯ ಕ್ಷೇತ್ರ ಜನಮಾನಸದಿ ಉಳಿದುಕೊಂಡಿದೆ: ಜಿ. ಸತೀಶ್ ಹೆಗ್ಡೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ವೈದ್ಯಕೀಯ ಕ್ಷೇತ್ರದಲ್ಲಿ ಡಾ .ವಾದಿರಾಜ್ ಅವರ ಜೀವನ ಮಾದರಿ ಅಲ್ಲದೆ ಜನಮಾನಸದಿ ಅಚ್ಚಳಿಯದೆ ಉಳಿದುಕೊಂಡಿದೆ ಎಂದು ಜಿ.ಎಸ್.ಬಿ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಜಿ. ಸತೀಶ್ ಹೆಗ್ಡೆ ಹೇಳಿದರು.

ಅವರು ಗುರುವಾರ ಕೋಟದ ವಾಸುದೇವ ಮಂಟಪದಲ್ಲಿ ಇತ್ತೀಚಿಗೆ ಅಗಲಿದ ಪ್ರಸಿದ್ಧ ಚರ್ಮರೋಗ ತಜ್ಞ ಡಾ.ವಾದಿರಾಜ್ ಇವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ವೈದ್ಯಕೀಯ ಸೇವೆ  ಕ್ಷೇತ್ರದಲ್ಲಿ ವಿಶ್ವ ಪ್ರಸಿದ್ಧಿ ಹೊಂದಿದ ಅವರು ಆ ಕಾಲಘಟ್ಟದಲ್ಲಿ ನಮ್ಮಂತ ಮೆಡಿಕಲ್ ರೆಫ್ ಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು, ಅಲ್ಲದೆ ಸಮಾಜಿಕ, ಸಾಂಸ್ಕೃತಿಕವಾಗಿ ತನ್ನನ್ನು ತಾನು ಗುರುತಿಸಿಕೊಂಡು ಎಲ್ಲರ ಅಚ್ಚುಮೆಚ್ಚಿನ ವೈದ್ಯರಾಗಿ ಗುರುತಿಸಿಕೊಂಡು ಕೋಟದಲ್ಲಿ ತನ್ನ ಕಾರ್ಯಕ್ಷೇತ್ರವಾಗಿರಿಸಿಕೊಂಡ ಮನೆಮಾತಾದ ವೈದ್ಯರು ಎಂದು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡಾ. ವಾದಿರಾಜ್ ಪತ್ನಿ ಭಾಗ್ಯವಾದಿರಾಜ್ ತನ್ನ ಪುತ್ರಿಯರೊಂದಿಗೆ ತನ್ನ ಪತಿಯ ಭಾವಚಿತ್ರಕ್ಕೆ ಪುಷ್ಭ ನಮನ ಸಲ್ಲಿಸಿದರು.

ಈ ವೇಳೆ ಕೋಟ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಎ. ಕುಂದರ್, ಮಾಜಿ ಅಧ್ಯಕ್ಷೆ ಸುಶೀಲ ಸೋಮಶೇಖರ್, ಕೋಟ ಸೇವಾಸಂಗಮದ ಟ್ರಸ್ಟಿ ವಸುಧಾ ಪ್ರಭು, ಕೋಟ ವಿವೇಕ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲ ನಾಗೇಶ್ ಶ್ಯಾನುಭಾಗ್, ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿ ಮಣೂರು, ಕೋಟ ಪಂಚಾಯತ್ ಮಾಜಿ ಸದಸ್ಯ ಚಂದ್ರ ಪೂಜಾರಿ ಡಾ. ವಾದಿರಾಜ್ ರವರ ವೈದ್ಯಕೀಯ ಕ್ಷೇತ್ರದ ದಿನಗಳ ನೆನಪಿಸಿ ನುಡಿನಮನ ಸಲ್ಲಿಸಿದರು.

ಕೋಟ ಮೂರ್ತೆದಾರರ ಸಂಘದ ಅಧ್ಯಕ್ಷ ಕೊರಗ ಪೂಜಾರಿ, ಸಿಇಓ ಜಗದೀಶ್ ಕೆಮ್ಮಣ್ಣು, ಕವಿತಾ ಸದಾನಂದ, ದೇವದಾಸ ಬಂಗೇರ, ನರಸಿಂಹ ಪ್ರಭು, ಸೋಮಶೇಖರ್, ಜಗನಾಥ್ ಕಾಂಚನ್, ರಾಧಕೃಷ್ಣ ನಾಯಕ್ ಇದ್ದರು.

ಕೋಟ ಚಂದ್ರಶೇಖರ ಆಚಾರ್ ಸ್ವಾಗತಿಸಿ, ನಿರೂಪಿಸಿ, ಡಾ. ವಾದಿರಾಜ್ ಪುತ್ರಿ ದೀಪ ಕೃತಜ್ಞತೆಗಳನ್ನು ಸಲ್ಲಿಸಿದರು.

Exit mobile version