ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ಕರಾವಳಿ ಕಣ್ಮಣಿ ದಿವಂಗತ ಕೆ.ಸಿ. ಕುಂದರ್ ಸ್ಮಾರಕ ಉದ್ಯಮ ಪುರಸ್ಕಾರಕ್ಕೆ ಉದ್ಯಮದಲ್ಲಿ ತಮ್ಮದೆ ವಿಶಿಷ್ಠವಾದ ಸ್ಥಾನ ಗಳಿಸಿರುವ ಮತ್ತು ಸಾಧನೆ ಮಾಡಿರುವ ಅಲೆನ್ ರೋಹನ್ ವಾಜ್ ಕಲ್ಯಾಣಪುರ ಮತ್ತು ಗಣೇಶ ಪೂಜಾರಿ ಬಾರ್ಕೂರು ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ಮೇ ತಿಂಗಳ 3ರ ಭಾನುವಾರ ಮಧ್ಯಾಹ್ನ 4.00 ಗಂಟೆಗೆ ಸರಿಯಾಗಿ ಕಾರಂತ ಥೀಮ್ ಪಾರ್ಕ್‌ನಲ್ಲಿ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ ಆನಂದ ಸಿ. ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಪಂಚಾಯತ್ ಪಿಡಿಓ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

