Kundapra.com ಕುಂದಾಪ್ರ ಡಾಟ್ ಕಾಂ

ಗುಂಡ್ಮಿ ಬಬ್ಬು ಸ್ವಾಮಿ ನೆಲೆ ಅಭಿವೃದ್ಧಿಗೆ ಕೈಜೋಡಿಸಿ: ರಘುರಾಜ್ ಕದ್ರಿ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಕರಾವಳಿ ದೈವಗಳ ನೆಲೆತಾಣವಾಗಿ ಸದಾ ಪವಾಡಗೈಯುವ ಕ್ಷೇತ್ರವಾಗಿ ರೂಪುಗೊಂಡಿದೆ ಅದರಲ್ಲಿ ಬಬ್ಬು ಸ್ವಾಮಿ ಮಹಿಳೆ ಜಗತ್ ಪ್ರಸಿದ್ಧವಾಗಿದೆ ಎಂದು ಕದ್ರಿ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಇಲ್ಲಿನ ಗುಂಡ್ಮಿ-ಸಾಸ್ತಾನದ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಸ್ಥಾನ ಸಿರಿ ಸಿಂಗಾರ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಗುಂಡ್ಮಿಯ ಬಬ್ಬು ಸ್ವಾಮಿ ಕ್ಷೇತ್ರ ತನ್ನದೆ ಆದ ಇತಿಹಾಸವನ್ನು ಹೊಂದಿದೆ. ಆದರೆ ಅಭಿವೃದ್ಧಿ ಹೊರಗಿರುವುದು ಬೇಸರ ತಂದಿದೆ, ಇದರ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಿ ಎಂದು ಮನವಿ ಮಾಡಿ ಬಬ್ಬು ಸ್ವಾಮಿ ದೈವದ ಮಹಿಮೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಅಂಬೇಡ್ಕರ್ ರವರ ದಾರಿಯಲ್ಲಿ ಮುನ್ನಡೆದ್ದರಿಂದ ಇವತ್ತು ಈ ಹಂತದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜಸೇವಕರಾದ ಹಂಗಾರಕಟ್ಟೆ ಇಬ್ರಾಹಿಂ ಸಾಹೇಬ್, ಜೋಸೆಫ್ ಮೆನೆಜಸ್, ಸಾಂಸ್ಕೃತಿಕ ಚಿಂತಕ ಚಂದ್ರ ಆಚಾರ್ ಕೋಟ, ಸಬಿತಾ ಗುಂಡ್ಮಿ, ಕೊರಗ ಪೂಜಾರಿ ಕೋಡಿ, ನಾಟಿವೈದ್ಯ ಮಂಜುನಾಥ್ ಭಂಡಾರಿ, ಚಂದ್ರಶೇಖರ, ನವೀನ್ ಪಡ್ರೆ, ಗ್ರಂಥಪಾಲಕಿ ಯಶೋದ ಗುಂಡ್ಮಿ, ಶಿಕ್ಷಕ ಅಶೋಕ್ ಗುಂಡ್ಮಿ, ಗುಂಡ್ಮಿ ಶಂಕರ್ ಕುಲಾಲ್, ಅಥ್ಲೆಟಿಕ್ ಪಟು ವಿಠ್ಠಲ್ ಶೆಟ್ಟಿಗಾರ್, ಧಾರ್ಮಿಕ ಮುಂದಾಳು ಪಾಂಡುರಂಗ ನಾಯ್ಕಾಡಿ, ಜೀ ವಾಹಿನಿ ಕಲಾವಿದೆ ದೀಕ್ಷಾ ಬ್ರಹ್ಮಾವರ, ನಿವೃತ್ತ ಪ್ರಾಂಶುಪಾಲೆ ವಸುಧಾ ಪಡಿಯಾರ್, ಕದ್ರಿ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ ಇವರುಗಳನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ನೆಮೋತ್ಸವ ಸಮಿತಿ ಅಧ್ಯಕ್ಷ ಕೇಶವ ಕುಂದರ್ ವಹಿಸಿದ್ದರು. ಧಾರ್ಮಿಕ ಪ್ರವಚನವನ್ನು ಪಾಂಡೇಶ್ವರ ಯೋಗ ಗುರುಕುಲದ ಮುಖ್ಯಸ್ಥ ಡಾ. ವಿದ್ವಾನ್ ವಿಜಯ ಮಂಜರ್ ಗೈದರು.

ಮುಖ್ಯ ಅಭ್ಯಾಗತರಾಗಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ ,ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುಲತಾ ಹೆಗ್ಡೆ, ಸ್ಪೀಕರ್ ಯುಟಿ ಖಾದರ್ ಆಪ್ತಸಹಾಯಕ ಪ್ರವೀಣ್ ಕುಮಾರ್, ಬಬ್ಬು ಸ್ವಾಮಿ ದೈವಸ್ಥಾನದ ಮುಕ್ತೇಸರ ಉದಯ್ ಶೆಟ್ಟಿ, ದೈವಸ್ಥಾನದ ಗುರಿಕಾರ ಚಂದ್ರ ಗುರಿಕಾರ, ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ದೈವಸ್ಥಾನದ ಅಧ್ಯಕ್ಷ ಚಂದ್ರ ಕಟ್ಟಿನಮನೆ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಎನ್ ಎಂಪಿಟಿ ಇದರ ಗಿರೀಜಾ, ಮಾಜಿ ಜಿ.ಪಂ ಅಧ್ಯಕ್ಷ ಭುಜಂಗ ಶೆಟ್ಟಿ, ನೇಮೋತ್ಸವ ಸಮಿತಿ ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ ಉಪಸ್ಥಿತರಿದ್ದರು.

ಸಮಿತಿಯ ಜತೆಕಾರ್ಯದರ್ಶಿ ಕೃಷ್ಣ ಆಚಾರ್ ಸ್ವಾಗತಿಸಿ, ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Exit mobile version