Site icon Kundapra.com ಕುಂದಾಪ್ರ ಡಾಟ್ ಕಾಂ

ಗಾಡಿ ಕೂಸ ಪೂಜಾರಿ ಅವಿಭಜಿತ ಜಿಲ್ಲೆಗಳ ಕಂಬಳ ಪ್ರಸಿಧ್ಧಿ: ಬಾರಕೂರು ಶಾಂತರಾಮ ಶೆಟ್ಟಿ

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಗಾಡಿ ಕೂಸ ಪೂಜಾರಿ ತನ್ನ ವೃತ್ತಿ ಕಾಯಕದ ಜತೆ ಅವಿಭಜಿತ ಜಿಲ್ಲೆಗಳ ಕಂಬಳ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾರಕೂರು ಶಾಂತರಾಮ ಶೆಟ್ಟಿ ಹೇಳಿದರು.

ಅವರು ಶನಿವಾರ ಕೋಟ ಮಾಂಗಲ್ಯ ಮಂದಿರದಲ್ಲಿ ಇತ್ತೀಚಿಗೆ ಅಗಲಿದ ಕಾಯಕ ಯೋಗಿ ಗಾಡಿ ಕೂಸ ಪೂಜಾರಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ತನ್ನ ಜೀವತ ಅವಧಿಯಲ್ಲಿ ಗಾಡಿ ಕೂಸ ಪೂಜಾರಿಯವರ ಸೇವೆ ಅನನ್ಯ ,ಎತ್ತಿನ ಗಾಡಿಯಲ್ಲಿ ಪ್ರಸಿದ್ಧ ಮಾತ್ರವಲ್ಲದೆ ಎರಡು ಜಿಲ್ಲೆಗಳ ಕಂಬಳ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಯ ಪುಟ ತೆರೆದಿದ್ದಾರೆ ಆ ಕಾಲಘಟ್ಟದಲ್ಲಿ ಎತ್ತಿನಗಾಡಿಯ ಮೂಲಕ ಜನಸಾಮಾನ್ಯರ ಹೃದಯದಲ್ಲಿ ಗಾಡಿ ಕೂಸಣ್ಣ ಎಂಬ ಪ್ರೀತಿಗೆ ಪಾತ್ರರಾಗಿದ್ದರು ಎಂದು ತಮ್ಮ ಮತ್ತು ಅವರ ಸ್ನೇಹದ ದಿನಗಳನ್ನು ನೆನಪಿಸಿದರು.

ಈ ಸಂದರ್ಭದಲ್ಲಿ ಚಿತ್ರಪಾಡಿಯ ಕಾರ್ತಟ್ಟು ಅಘೋರೇಶ್ಚರ ದೇಗುಲದ ಅಧ್ಯಕ್ಷ ಚಂದ್ರಶೇಖರ ಕಾರಂತ್ ನುಡಿನಮನ ಸಲ್ಲಿಸಿದರು. ಈ ವೇಳೆ ಹಲವು ಗಣ್ಯರು ಉಪಸ್ಥಿತರಿದ್ದು ಕೂಸ ಪೂಜಾರಿ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಿದರು.

ಗಾಡಿ ಕೂಸ ಪೂಜಾರಿ ಪುತ್ರ ಭೋಜ ಪೂಜಾರಿ, ಸಂತೋಷ್ ಪೂಜಾರಿ ಸಹಿತ ಕುಟುಂಬದ ಸದಸ್ಯರು ಇದ್ದರು. ಶಿಕ್ಷಕ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕ ನುಡಿಗಳನ್ನಾಡಿ, ನಿರೂಪಿಸಿದರು. ಟಿ. ಮಂಜುನಾಥ್ ಗಿಳಿಯಾರು ಕೂಸ ಪೂಜಾರಿ ಕುಟುಂಬದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.

Exit mobile version