Site icon Kundapra.com ಕುಂದಾಪ್ರ ಡಾಟ್ ಕಾಂ

ವಡ್ಡರ್ಸೆ ಪಂಚಾಯತ್ ಮಾಜಿ ಹಿರಿಯ ಸದಸ್ಯ ಕೋಟಿ ಪೂಜಾರಿ ಸಾಮಾಜಿಕ ಕಾಳಜಿಗೆ ವ್ಯಾಪಕ ಪ್ರಶಂಸೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ವಡ್ಡರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಎಂ.ಜಿ ಕಾಲೇಜಿನ ಸೂರಿಬೆಟ್ಟು ಹೋಗುವ ರಸ್ತೆಯಲ್ಲಿದ್ದ ಬಾರಿ ಪ್ರಮಾಣದ ತ್ಯಾಜ್ಯವನ್ನು ಇಲ್ಲಿನ ಪಂಚಾಯತ್ ಮಾಜಿ ಸದಸ್ಯ ಕೋಟಿ ಪೂಜಾರಿ ತಮ್ಮ ಸ್ವಂತ ಕರ್ಚಿನೊಂದಿಗೆ ತೆರವುಗೊಳಿಸಿದ ಘಟನೆ ಶನಿವಾರ ನಡೆದಿದೆ.

ಎಂ.ಜಿ ಕಾಲೇಜಿನ ಸೂರಿಬೆಟ್ಟು ಭಾಗದ ಅರ್ಧ ಕಿ.ಮೀ ರಸ್ತೆಯ ಉದ್ದಕ್ಕೂ ಸಾಕಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಗಮನಿಸಿದ ಕೋಟಿ ಪೂಜಾರಿ ಸುಮಾರು 180 ಕ್ಕೂ ಅಧಿಕ ಚೀಲ ತ್ಯಾಜ್ಯ ಸ್ವತಃ ತಾವೇ ನಿಂತು ತೆರೆವುಗೊಳಿಸಿದರು ಈ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು ಇವರ ಕಾರ್ಯವನ್ನು ಪರಿಸರಪ್ರೇಮಿಗಳು ಅಭಿನಂದಿಸಿದ್ದಾರೆ.

ಕಸವನ್ನು ಕಂಡಕಂಡಲ್ಲಿ ಎಸೆಯದಿರಿ ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಪ್ರಸ್ತುತ ತಾಪಮಾನಕ್ಕೆ ಈ ತ್ಯಾಜ್ಯಗಳು ಮನುಕುಲದ ಆರೋಗ್ಯದ ಮೇಲೆ ಬಾರಿ ದುಸ್ಥಿತಿಯನ್ನು ತಂದಿಡಲಿದೆ ಅದಕ್ಕಾಗಿಯೇ ಸ್ವತಃ ನಾನೆ ಸ್ವಂತ ಹಣದಲ್ಲಿ ತೆರವುಗೊಳಿಸಲು ಮುಂದಾಗಿದ್ದೇನೆ ಎಂದು ಪಂಚಾಯತ್ ಮಾಜಿ ಹಿರಿಯ ಸದಸ್ಯ ಕೋಟಿ ಪೂಜಾರಿ ಹೇಳಿದರು.

Exit mobile version