ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ ಅತಿ ಕ್ಲಿಷ್ಟಕರವೆನಿಸಿದ ಪರೀಕ್ಷೆಗಳಲ್ಲೊಂದಾದ ಜೆಇಇ ಅಡ್ವಾನ್ಸ್ – 2026ನೇ ಸಾಲಿನ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ನಾಗದೇವ್ ಎಂ.ಜಿ. ರಾಷ್ಟ್ರಮಟ್ಟದಲ್ಲಿ 196 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಫಲಿತಾಂಶದ ವಿವರ:
ನಾಗದೇವ್ ಎಂ.ಜಿ. 196, ಖುಷಿ ರಾಜ ವಿ. 648, ದಿಶಾಂತ್ ಎಂ.1207, ರಶ್ಮಿ ಆರ್. ಎಚ್. 1754, ಧನುಷ್ ಎಚ್. ಎ. 2193, ನಯನ ಡಿ. ಗೊಂಡ 2638, ಸೃಜನಾ ಎಸ್. 3618, ಶಶಾಂಕ್ ಡಿ. ಎಸ್. 3800, ಹೃತಿಕ್ ಮಹೇಶ್ 3803, ತೇಜಸ್ ಆರ್. ಬಿ. 5124, ಸುಜನ್ ಕೆ. ಎಚ್. 5377, ವಿಶ್ವಾಸ್ ಕೆ. ಎನ್. 5549, ಧ್ರುವ ವಿ. ಬಿ. 6057, ನಮಿತ್ ಕೆ. ಹೆಗ್ಡೆ 8164, ಪ್ರಥಮ್ ಟಿ. 10982, ಧ್ರುಶ್ 11103, ನೀನಾದ್ ರಾಜೇಶ್ ನಾಯ್ಕ್ 12563, ಸಂವಿತ್ ಎ. ಗೋಕರ್ಣ 19289, ಪ್ರಜ್ವಲ್ ಭಟ್ 16885 ರ‍್ಯಾಂಕ್ ಪಡೆದುಕೊಂಡಿದ್ದಾರೆ.
ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಸಂಸ್ಥೆಯ ಜೆಇಇ ಅಡ್ವಾನ್ಸ್ ಪರೀಕ್ಷೆಯ ಸಂಯೋಜಕರಾದ ತಿರುಮಲಾ ರೆಡ್ಡಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.

