Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಕಾಂಗ್ರೆಸ್ ಗೆಲುವು ಖಚಿತ : ಜಿ.ಎ. ಬಾವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ೨೦೧೩ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ೧೬೫ ಆಶ್ವಾಸನೆಗಳಲ್ಲಿ ಸಂಪೂರ್ಣವಾಗಿ ೧೬೫ನ್ನು ಈಗಾಗಲೇ ಈಡೇರಿಸಿದೆ. ಮತ್ತು ಜನಪರವಾದ ಹಾಗೂ ಭ್ರಷ್ಟಾಚಾರ ರಹಿತವಾದ ಆಡಳಿತ ನೀಡಿದೆ. ಆ ಮೂಲಕ ಕರ್ನಾಟಕದಲ್ಲಿ ಮತ್ತೊಮ್ಮೆ ಸಿದ್ದಾರಾಮಯ್ಯನವರ ಸರಕಾರ ಅಧಿಕಾರಕ್ಕೆ ಬರುವುದು ಖಚಿತಗೊಂಡಿದೆ ಎಂದು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ’ಮನೆ ಮನೆಗೆ ಕಾಂಗ್ರೆಸ್’ ಉಸ್ತುವಾರಿ ಜಿ.ಎ.ಬಾವ ಹೇಳಿದ್ದಾರೆ.

ಅವರು ಕುಂದಾಪುರ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ಪುರಸಭಾ ಮಟ್ಟದ ’ಮನೆ ಮನೆಗೆ ಕಾಂಗ್ರೆಸ್’ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸದಾ ರೇಪ್, ಕೊಲೆ, ಲೂಟಿ, ಬ್ಲೂಫಿಲ್ಮ್, ಜೈಲುವಾಸ, ಭಿನ್ನಮತ, ಡಿನೋಡಿಫಿಕೇಶನ್, ರೆಸಾರ್ಟ್ ರಾಜಕಾರಣ ಮುಂತಾದ ಹಗರಣಗಳಲ್ಲೇ ಕಾಲ ಕಳೆದಿತ್ತು. ಆದರೆ ಸಿದ್ಧಾರಾಮಯ್ಯನವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಸರಕಾರ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಧಾರೆ, ಕ್ಷೀರಭಾಗ್ಯ, ಮೈತ್ರಿ, ವಿದ್ಯಾಸಿರಿ, ರಾಜೀವ್ ಆರೋಗ್ಯಭ್ಯಾಗ್ಯ, ಶುದ್ಧನೀರು, ಋಣಮುಕ್ತ, ವಸತಿಭಾಗ್ಯ, ಸೌರಭಾಗ್ಯ, ಶಾದಿಭಾಗ್ಯ, ಪಶುಭಾಗ್ಯ, ಹನಿ ನೀರಾವರಿ, ಮನಸ್ವಿನಿ, ನಿರ್ಮಲಭಾಗ್ಯ ಹೀಗೆ ನೂರಾರು ಜನಪರ ಯೋಜನೆಗಳನ್ನು ನಾಡಿಗೆ ನೀಡಿದೆ ಆ ಮೂಲಕ ಜನಮಾನಸದಲ್ಲಿ ನೆಲೆಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಇಂಟಕ್ ರಾಜ್ಯಾಧ್ಯಕ್ಷರಾದ ರಾಕೇಶ್ ಮಲ್ಲಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್, ಕಾಂಗ್ರೆಸ್ ಹಿಂದುಳಿದ ವರ್ಗ ರಾಜ್ಯ ಉಪಾಧ್ಯಕ್ಷ ಮಾಣಿಗೋಪಾಲ್, ಮುಖಂಡರುಗಳಾದ ಹರಿಪ್ರಸಾದ್ ಶೆಟ್ಟಿ, ಕೃಷ್ಣದೇವ ಕಾರಂತ, ನಗರ ಪ್ರಾಧಿಕಾರ ಅಧ್ಯಕ್ಷ ವಿಕಾಸ ಹೆಗ್ಡೆ, ಕಾಂಗ್ರೆಸ್ ಐಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಎ.ಪಿಎಂ.ಸಿ ಉಪಾಧ್ಯಕ್ಷ ಗಣೇಶ ಶೇರೆಗಾರ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ತಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಪುತ್ರನ್,ಆಶಾ ಕಾರ್ವಾಲ್ಲೋ ಶೋಭಾ ಸಚ್ಚಿದಾನಂದ, ಶಾಲೆಟ್ ರೆಬೆಲ್ಲೋ, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕ್ವಾಡಿ ರಮೇಶ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಹಾರುನ್ ಸಾಹೇನ್, ದೇವಕಿ ಸಣ್ಣಯ್ಯ, ಶಿವಾನಂದ ಕೆ., ಪುರಸಭಾ ಸದಸ್ಯರುಗಳಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರಿಗಾರ್, ಪ್ರಭಾಕರ ಕೋಡಿ, ಚಂದ್ರ ಅಮೀನ್, ಕೇಶವ ಭಟ್ಟ, ಕೆ.ಜಿ.ನಿತ್ಯಾನಂದ, ನಾಗರಾಜ ನಾಯ್ಕ, ಸದಾನಂದ ಖಾರ್ವಿ, ಐಟಿ ಸೆಲ್ ಜಿಲ್ಲಾಧ್ಯಕ್ಷ ವಿಶ್ವಾಸ್ ಶೆಟ್ಟಿ, ಆರ್‌ಜಿ ಬ್ರಿಗೇಡ್ ಜಿಲ್ಲಾಧ್ಯಕ್ಷ ರಟ್ಟಾಡಿ ಸಂಪತ್ ಕುಮಾರ್ ಶೆಟ್ಟಿ, ಕೃಷ್ಣ ಪೂಜಾರಿ, ತಿಮ್ಮಪ್ಪ ಪೂಜಾರಿ, ದಿನೇಶ್ ಖಾರ್ವಿ, ಅಬ್ಬು ಮಹಮ್ಮದ್, ಚಂದ್ರಕಾಂತ ಖಾರ್ವಿ, ಮಧುಕರ, ವಿಠಲ ಕಾಂಚನ್, ಸುರೇಶ್ ಕೆ., ಅಶೋಕ್ ಸುವರ್ಣ, ಗಣೇಶ್ ಶೆಟ್ಟಿ, ಕೋಡಿ ಸುನಿಲ್ ಪೂಜಾರಿ, ಶಶಿಕಾಂತ ಕಾಂಚನ್, ಆನಂದ ಕೋಡಿ, ರೋಶನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Exit mobile version