ಪ್ರಧಾನಿ ಮೋದಿ ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲ: ಎಐಸಿಸಿ ಕಾರ‍್ಯದರ್ಶಿ ವಿಷ್ಣುನಾಥನ್

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ಪ್ರಧಾನಿ ಪ್ರತಿಯೊಬ್ಬ ಪ್ರಜೆಗೂ 15 ಲಕ್ಷ ಹಣ ಕೊಡುತ್ತೇನೆ ಎಂದರು. ಕೋಟಿ ಲೆಕ್ಕದಲ್ಲಿ ಉದ್ಯೋಗ ಕೊಡುವ ಭರವಸೆ ನೀಡಿದರು, ಆದರೆ ಪದವೀಧರ ಬೋಂಡಾ, ಎಂಬಿಬಿಎಸ್ ಬೋಂಡ, ಎಂಬಿಎ ಬೋಂಡ, ಬಿಕಾಂ ಬೋಂಡ ಮಾರುವಂತೆ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ‍್ಯದರ್ಶಿ ವಿಷ್ಣುನಾಥನ್ ಟೀಕಿಸಿದರು.

Call us

Click Here

ಕುಂದಾಪುರ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ಭೂತ್ ಮಟ್ಟದ ಕಾಂಗ್ರೆಸ್ ಕಾರ‍್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ರೂಢಿಯಲಿ ಆಡದೇ ಮಾಡುವವನು ಉತ್ತಮನು, ಆಡಿಯೂ ಮಾಡದವನು ಮಧ್ಯಮನು, ಆಡಿಯೂ ಮಾಡದವರು ರೂಢಿಯೊಳು ಅಧಮರು! ಸಿದ್ದರಾಮಯ್ಯ ಆಡದೇ ಮಾಡುವ ಮೂಲಕ ಉತ್ತಮರಾದರೆ, ನರೇಂದ್ರ ಮೋದಿ ಆಡಿಯೂ ಮಾಡದೆ ರೂಢಿಯಲಿ..? ಎಂದು ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದರು.

ರಾಜ್ಯದಲ್ಲಿ 53 ಸಾವಿರ ಭೂತಮಟ್ಟದ ಕಮಿಟಿ ರಚಿಸಿ, ಮನೆ ಮನೆಗೆ ಕಾಂಗ್ರೆಸ್ ಕಾರ‍್ಯಕ್ರಮ ಯಶಸ್ವಿಗೊಳಿಸಿದೆ. ಭೂತಮಟ್ಟದಲ್ಲಿ ಪಕ್ಷ ಗಟ್ಟಿಯಾದರೆ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಿದ್ದು, ಪ್ರತಿ ಮನೆಯ ಜೊತೆ ಲಿಂಕ್ ಬೆಳೆಸುವ ಮೂಲಕ ಕುಂದಾಪುರದಲ್ಲಿ ಕಾಂಗ್ರೆಸ್ ಗೆಲವಿಗೆ ಕಾರ‍್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು. ರಾಜ್ಯದ ಜನರಿಗೆ ಹಲವರು ಭ್ಯಾಗ್ಯಗಳ ಕೊಟ್ಟ ರಾಜ್ಯ ಸರ್ಕಾರ ದೇಶಕ್ಕೆ ಮಾಡಲ್ ಸರ್ಕಾರ ಎನ್ನಿಸಿಕೊಂಡಿದೆ. 2013ರ ಚುನಾವಣೆಯಲ್ಲಿ ಕೊಟ್ಟ ಎಲ್ಲಾ ಭರವಸೆ ಈಡೇರಿಸಿ ರಾಜ್ಯದ ಜನರಿಗೆ ಹೊಸ ಭರವಸೆ ಕೊಟ್ಟ ಪ್ರಥಮ ಸರ್ಕಾರ ಕಾಂಗ್ರೆಸ್ ಎಂದರು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕ್ಷೇತ್ರ ಉಸ್ತುವಾರಿ ಜಿ.ಎಂ.ಭಾವ, ರಾಜ್ಯ ಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕಾಂಗ್ರೆಸ್ ಮುಖಂಡರಾದ ಮಂಜುನಾಥ ಭಂಡಾರಿ, ಮಾಣಿ ಗೋಪಾಲ, ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ಮಮತಾ ಗಟ್ಟಿ, ದೇವಖಿ ಸಣ್ಣಯ್ಯ ಹಿರಿಯಣ್ಣ ಚಾತ್ರಬೆಟ್ಟು, ಅಮೃತ್ ಶೆಣೈ, ಹಾರೂನ್ ಸಾಹೇಬ್, ಕೆದೂರು ಸದಾನಂದ ಶೆಟ್ಟಿ,  ವಿಕಾಸ್ ಹೆಗ್ಡೆ, ಜ್ಯೋತಿ ಪುತ್ರನ್, ದೇವಾನಂದ ಶೆಟ್ಟಿ, ಇಶ್ಛಿತ್ ಶೆಟ್ಟಿ ಮುಂತಾದವರು ಇದ್ದರು. ಬ್ಲಾಕ್ ಕಾಂಗ್ರೆಸ್ ಕಾರ‍್ಯದರ್ಶಿ ನಾರಾಯಣ ಆಚಾರ್ಯ ನಿರೂಪಿಸಿದರು.

Leave a Reply