Kundapra.com ಕುಂದಾಪ್ರ ಡಾಟ್ ಕಾಂ

ಮಗಳ ಹುಟ್ಟುಹಬ್ಬ ಮಾಡಬೇಕಿದ್ದ ಮನೆಯಲ್ಲೀಗ ಸೂತಕದ ಛಾಯೆ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ:ತನ್ನ ಮಗಳ 6ನೇ ವರ್ಷದ ಹುಟ್ಟುಹಬ್ಬದಂದು ಸಂಭ್ರಮಿಸಬೇಕೆಂಬ ತವಕದಲ್ಲಿದ್ದ ತಾಯಿ ಶವವಾಗಿ ಮಗಳ ಹುಟ್ಟಿದ ದಿನವೇ ಚಿತೆಯಲ್ಲಿ ಭಸ್ಮವಾಗಿ ಹೋಗಿದ್ದಾರೆ. ಬ್ರಹ್ಮಾವರ ಸಮೀಪದ ಕುಮ್ರಗೋಡುವಿನ ವಿಲನ್ ರೆಸಿಡೆಸ್ಸಿಯಲ್ಲಿ ಸೋಮವಾರ ವಿಶಾಲ ಗಾಣಿಗ (35) ಎಂಬವರ ಕೊಲೆಯಾಗಿದ್ದು ಬುಧವಾರ ಉಪ್ಪುಂದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಹಗಲಲ್ಲೇ ನಡೆದ ಈ ಕೊಲೆಯ ಬಗ್ಗೆ ಬ್ರಹ್ಮಾವರ ಪೋಲೀಸರು 3 ದಿನಗಳಿಂದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು, ಪ್ರಕರಣದ ಜಾಡು ಹಿಡಿದು ಹೊರಟವರಿಗೆ ಈತನಕ ನಿಖರ ಸುಳಿವು ದೊರೆಯದಿರುವುದು ಪ್ರಕರಣವನ್ನು ಕಗ್ಗಂಟಾಗಿಸಿದೆ.

ವಿಶಾಲ ಗಾಣಿಗ ಕುಮ್ರಗೋಡು ಸಮೀಪದ ವಿಲನ್ ರೆಸಿಡೆಸ್ಸಿಯ 3ನೇ ಮಹಡಿಯ 21ನೇ ಸಂಖ್ಯೆಯ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು. ಸೋಮವಾರ ತನ್ನ ತಂದೆ ತಾಯಿ 6 ವರ್ಷದ ಮಗುವಿನೊಂದಿಗೆ ಆಟೋವೊಂದರಲ್ಲಿ ಗಂಗೊಳ್ಳಿ ಸಮೀಪದ ನಾಯಕವಾಡಿಯ ಮನೆಗೆ ತೆರಳಿದ್ದು ಅಲ್ಲಿ ತಂದೆ, ಮಗುವನ್ನು ಬಿಟ್ಟು ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಅದೇ ಆಟೋದಲ್ಲಿ ಹಿಂದಕ್ಕೆ ಬಂದಿದ್ದಳು. ಸಾಲಿಗ್ರಾಮ ಸಮೀಪ ಬರುವಾಗ ಗಂಡನಿಗೆ ಮೆಸೇಜ್ ಮಾಡಿ ಬರ್ತ್ ಡೇಗೆ ಕೇಕ್ ಆರ್ಡರ್ ಮಾಡಿದ್ದೇನೆ ಎಂದು ತಿಳಿಸಿದ್ದಳು. ತಂದೆ ಮಗುವನ್ನು ಬಿಟ್ಟು ಮರಳಿ ಒಬ್ಬರೇ ಯಾಕೆ ಪ್ಲಾಟಿಗೆ ಬಂದರು? ಇವರೇ ಕೊಲೆಗಾರನನ್ನು ಅಹ್ವಾನಿಸಿಕೊಂಡರೇ, ಒಬ್ಬರೆ ಇರುವುದನ್ನು ಗಮನಿಸಿ ಪರಿಚಿತ ವ್ಯಕ್ತಿಯೇ ಕೊಲೆ ಮಾಡಿರಬಹುದೇ ಎಂಬ ಸಂಶಯ ಮೂಡಿದೆ.

ತನ್ನ ಪತಿಯೊಂದಿಗಿರುವ ವಿಶಾಲಾ ಗಾಣಿಗ

ಆಸ್ತಿ ವ್ಯವಹಾರಕ್ಕಾಗಿ ಊರಿಗೆ ಬಂದಿದ್ದರು:
ಗುಜ್ಜಾಡಿ ನಾಯಕವಾಡಿಯ ವಾಸು ಗಾಣಿಗ ಅವರ ಕೊನೆಯ ಮಗಳು ವಿಶಾಲ ಗಾಣಿಗ ಅವರು ಬಿಜೂರು ಚಾರಕೊಡ್ಲು ರಾಮಕೃಷ್ಣ ಗಾಣಿಗ ಅವರನ್ನು ವಿವಾಹವಾಗಿ ದುಬೈನಲ್ಲಿ ವಾಸವಾಗಿದ್ದರು. ಊರಿಗೆ ಬಂದಾಗ ಊರಿಗೆ ಬಂದಾಗ ಉಳಿದುಕೊಳ್ಳಲು ಕರನ್ ಪ್ರಾಪರ್ಟಿಸ್‌ನ ವಿಲನ್ ರೆಸಿಡೆಸ್ಸಿಯಲ್ಲಿ ಫ್ಲ್ಯಾಟ್ ಖರೀದಿಸಿದ್ದಳು. ಸುಮಾರು ಮೂರು ತಿಂಗಳ ಹಿಂದೆ ಪತಿಯ ಆಸ್ತಿಯ ದಸ್ತಾವೇಜುಗಳಿಗೆ ಸಹಿ ಹಾಕಲು ವಿಶಾಲ ಅವರ ತಂದೆ ವಾಸು ಗಾಣಿಗರಿಗೆ ಅಧಿಕಾರ ಪತ್ರವನ್ನು ನೀಡಿ ರಾಮಕೃಷ್ಣ ಮತ್ತು ವಿಶಾಲ ದುಬೈಗೆ ತೆರಳಿದ್ದರು. ಜೂ.29ರಂದು ಮಗಳು ಆರ್ವಿಯೊಂದಿಗೆ ದುಬೈನಿಂದ ಹೊರಟ ವಿಶಾಲ ಜೂ.30ಕ್ಕೆ ಕುಮ್ರಗೋಡಿಗೆ ಬಂದಿದ್ದರು. ಜು.7ರಂದು ಆಸ್ತಿಯ ಪಾಲು ಪಟ್ಟಿ ಆಗಿದ್ದು ಘಟನೆ ನಡೆದ ದಿನ ಬೆಳಿಗ್ಗೆ ಕುಮ್ರಗೋಡಿನಿಂದ ತಂದೆ ತಾಯಿ ಮತ್ತು ಮಗಳೊಂದಿಗ ರಿಕ್ಷಾದಲ್ಲಿ ಗುಜ್ಜಾಡಿಗೆ ಬಂದಿದ್ದರು. ನಂತರ ಬ್ರಹ್ಮಾವರದ ಕೆನರಾ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿ ಗಂಡನ ಮನೆಗೆ ಕೊಟ್ಟು ಬರುತ್ತೇನೆ ಎಂದು ಅದೇ ರಿಕ್ಷಾದಲ್ಲಿ ವಾಪಾಸು ಹೋಗಿದ್ದರು.

ಪ್ರಕರಣದ ತನಿಖೆಗೆ ನಾಲ್ಕು ತಂಡ:
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ನಾಲ್ಕು ತಂಡ ರಚಿಸಿದ್ದು, ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ಸಿಪಿಐ ಅನಂತಪಧ್ಮನಾಭ, ಉಡುಪಿ ಸಿಪಿಐ ಮಂಜುನಾಥ್, ಮಣಿಪಾಲ ಠಾಣೆ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ. ಮತ್ತು ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತ್ರತ್ವದಲ್ಲಿ ತಂಡ ರಚನೆಯಾಗಿದೆ.

ಪೋಲೀಸರು ಇವರ ಕಾಲ್ ಡೀಟೈಲ್ಸ್ ತೆಗೆದಾಗ ಯಾವುದೇ ಸಂಶಯಿತ ವ್ಯಕ್ತಿಯ ಮೊಬೈಲ್ ಸಂಖ್ಯೆ ದೊರಕಿಲ್ಲ. ಈ ಫ್ಲ್ಯಾಟ್ನಲ್ಲಿ ಸಿಸಿ ಕ್ಯಾಮರ ಕೂಡ ಇಲ್ಲ ಆದ್ದರಿಂಧ ಪೋಲೀಸರಿಗೆ ಈ ಮನೆಗೆ ಯಾರು ಬಂದು ಹೋದರು ಎನ್ನುವ ಮಾಹಿತಿ ಇಲ್ಲಿಯವರೆಗೆ ಲಭಿಸಿಲ್ಲ ಎನ್ನಲಾಗಿದೆ.

ಪರಿಚಿತರಿಂದಲೇ ಕೊಲೆಯಾಗಿರುವ ಶಂಕೆ:
ಮನೆಯ ಒಳಗೆ ಟೀ ಕುಡಿದ ಕಪ್‌ಗಳು ಇತ್ತು ಎನ್ನಲಾಗಿತ್ತು ಇದು ಅನುಮಾನಕ್ಕೆ ಕಾರಣವಾಗಿದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಮಂದಿಯಿಂದ ಈ ಕೃತ್ಯ ನಡೆದಿರುವ ಅನುಮಾನವಿದೆ. ವಿಶಾಲ ಅವರು ಅಪರಿಚಿತರನ್ನು ಮನೆಯೊಳಗೆ ಸೇರಿಸುತ್ತಿರಲಿಲ್ಲ. ಗಂಡನ ಸ್ನೇಹಿತರೂ ಮನೆಗೆ ಬಂದರೂ ಗಂಡನಿಗೆ ವೀಡಿಯೋ ಕಾಲ್ ಮಾಡಿ ಖಚಿತಪಡಿಸಿಕೊಂಡ ಮೇಲೆ ಒಳಗೆ ಕರೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಪರಿಚಿತರಿಂದಲೇ ಈ ಕೃತ್ಯ ನಡೆದಿರಬಹುದು ಎನ್ನುವ ಸಂಶಯವಿದೆ. ಘಟನೆಗೆ ಸಂಬಂಧಿಸಿ ಬಾಡಿಗೆಗೆ ಬಂಧ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಆತ ತಾನು ಗುಜ್ಜಾಡಿಯಿಂದ ಪುನಃ ಅಪಾರ್ಟ್‌ಮೆಂಟ್‌ಗೆ ಬಿಟ್ಟು ವಾಪಾಸಾಗಿರುವುದಾಗಿ ತಿಳಿಸಿದ್ದಾನೆ.

ಸ್ಥಳಕ್ಕೆ ಐಜಿಪಿ ಭೇಟಿ:
ಕುಮ್ರಗೋಡಿನಲ್ಲಿ ನಡೆದ ವಿಶಾಲ ಗಾಣಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಡುಪಿ ಎಸ್ಪಿ ಕಚೇರಿಯಲ್ಲಿ ತನಿಖಾಧಿಕಾರಿಗಳೊಂದಿಗೆ ಸಭೆ ನಡೆಸಿದ ಐಜಿಪಿ, ಸ್ಥಳಕ್ಕೆ ಭೆಟಿ ನೀಡಿ ತನಿಖಾಧಿಕಾರಿಗಳಿಗೆ ಕೆಲವೊಂದು ಸೂಚನೆ ನೀಡಿದರು.

Exit mobile version