Kundapra.com ಕುಂದಾಪ್ರ ಡಾಟ್ ಕಾಂ

ಜನಪರ ಕಾರ್ಯದಿಂದ ಜನಪ್ರಿಯತೆ: ಸಿಇಓ ಕನಗವಲ್ಲಿ

ಕುಂದಾಪುರ: ಅಧಿಕಾರಿಗಳ ತಮ್ಮ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನಿನಂತೆ ಕೆಲಸ ಮಾಡಿದರೆ ಜನ ನಮ್ಮ ಕೆಲಸವನ್ನು ಮೆಚ್ಚಿ ವಿಶ್ವಾಸ ಇಡುತ್ತಾರೆ. ಕಳೆದ ಎರಡು ವರ್ಷ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಮಾಡಿದ ಕೆಲಸ ತೃಪ್ತಿ ತಂದಿದೆ ಎಂದು ಜಿಪಂ ಸಿಇಓ ಕನಗವಲ್ಲಿ ಹೇಳಿದರು. ಕುಂದಾಪುರ ತಾಲೂಕ್ ಪಂಚಾಯಿತಿ ಮತ್ತು ವಿವಿಧ ಇಲಾಖೆ ಆಶ್ರಯದಲ್ಲಿ ತಾಲೂಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ಗ್ರಾಪಂ.ನಲ್ಲಿರುವ ಪಿಡಿಓ ಕೊರೆತೆ ನೀಗಿಸಿ, ಜನರ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜನೋಪಯೋಗಿ ಕೆಲಸ ಮಾಡಿದರೆ ಜನ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎನ್ನೋದಕ್ಕೆ ನೀವು ನೀಡುತ್ತಿರುವ ಅಭಿನಂದನೆ ಸಾಕ್ಷಿ ಎಂದ ಅವರು, ಬೀದರ್ ಜಿಲ್ಲೆಯಲ್ಲಿದ್ದಾಗಲೂ ಗುಣಮಟ್ಟದ ಸೇವೆ ಮೂಲಕ ಇಂದಿಗೂ ನನ್ನನ್ನು ಅವರು ನೆನಪಿಟ್ಟುಕೊಂಡಿದ್ದಾರೆ ಎಂದು ತಿಳಿಸಿದರು. ಕುಂದಾಪುರ ತಾಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಶಿಕ್ಷಣ ಸ್ಥಾಯಿನ ಸಮಿತಿ ಮಾಜಿ ಅಧ್ಯಕ್ಷ ಗಣಪತಿ ಶ್ರೀಯಾನ್, ಜಿಪಂ ವಿರೋಧ ಪಕ್ಷದ ನಾಯಕ ಅನಂತ ಮೋವಾಡಿ, ಕುಂದಾಪುರ ತಾಪಂ. ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಶೆಟ್ಟಿ ರಟ್ಟಾಡಿ, ಮಾಜಿ ಕುಂದಾಪುರ ತಾಪಂ ಉಪಾಧ್ಯಕ್ಷೆ ಹೇಮಾವತಿ ಪೂಜಾರಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಸಿಇಒ ಕನಕವಲ್ಲಿ ಅವರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ಪಿಡಿಒಗಳ ಪರವಾಗಿ ಸಂತೋಷ್, ಅಧಿಕಾರಿಗಳ ಪರವಾಗಿ ಸೂರ್ಯನಾರಾಯಣ ಉಪಾಧ್ಯಾಯ, ಶೇಷಪ್ಪ ಮಾತನಾಡಿದರು. ಇಒ ನಾರಾಯಣ ಸ್ವಾಮಿ ಇದ್ದರು. ಅಕ್ಷರದಾಸೋಹ ಸಹಾಯಕ ಅಧಿಕಾರಿ ಸೀತಾರಾಮ ಶೆಟ್ಟಿ ಸ್ವಾಗತಿಸಿ, ವಂದಿಸಿದಿರು.

Exit mobile version