ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಜನತಾ ದರ್ಶನದಲ್ಲಿ ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶಯದಂತೆ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ತಿಂಗಳಿಗೊಮ್ಮೆ ಜನತಾದರ್ಶನ ನಡೆಸಲಾಗುತ್ತಿದೆ. ಜನರ ಸಮಸ್ಯೆ ನೇರವಾಗಿ ಆಲಿಸಿ ಪರಿಹಾರ ಕಂಡುಕೊಳ್ಳುವ ಜೊತೆಗೆ ವಿವಿಧ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಇರಾದೆ ನಮ್ಮದು ಎಂದವರು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಈ ಮಧ್ಯೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಭ್ರಷ್ಟಾಚಾರ ನಿಗ್ರಹ ದಳ ರಚಿಸಿ ಲೋಕಾಯುಕ್ತ ದುರ್ಬಲಗೊಳಿಸುವ ಇರಾದೆ ನಮ್ಮ ಮುಂದಿಲ್ಲ. ಈಗಾಗಲೇ ದೇಶದ ಇತರ ರಾಜ್ಯಗಳಲ್ಲಿಯೂ ಎಸಿಬಿ ರಚನೆಯಾಗಿದೆ. ಮಿಗಿಲಾಗಿ ಹೈಕೋರ್ಟ್ ಅದೇಶದಂತೆ ರಾಜ್ಯದಲ್ಲೂ ಎಸಿಬಿ ರಚನೆಗೆ ಸಂಪುಟದಲ್ಲಿ ಚರ್ಚೆ ನಡೆಸಿ ತೀರ್ಮಾನಕ್ಕೆ ಬಳಿಕ ಬರಲಾಗಿದೆ. ರಾಜ್ಯ ಸರಕಾರ ಲೋಕಾಯಕ್ತ ಹಲ್ಲು ಕೀಳುವ ಕೆಲಸ ಮಾಡಿಲ್ಲ. ಆದರೆ ಈ ಹಿಂದೆ ಲೋಕಾಯುಕ್ತಕ್ಕೆ ಹಲ್ಲೇ ಇರಲಿಲ್ಲ ಎಂದು ಲೇವಡಿ ಮಾಡಿದರು.
ಡೀಮ್ಡ್ ಫಾರೆಸ್ಟ್ 65ಲಕ್ಷದಿಂದ 13ಸಾವಿರಕ್ಕೆ ಇಳಿಕೆ
ಉಡುಪಿ ಜಿಲ್ಲೆಯಲ್ಲಿ ಒಟ್ಟು ಅರವತ್ತೈದು ಲಕ್ಷ ಹೆಕ್ಟೇರ್ ಭೂಮಿ ಡೀಮ್ಡ್ ಫಾರೆಸ್ಟ್ ವ್ಯಾಕ್ತಿಗೆ ಒಳಪಟ್ಟಿದ್ದು ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ, ಡೀಮ್ಟ್ ಫಾರೆಸ್ಟ್‌ನಿಂದ ಪರಂಭೂಕ ಮತ್ತು ಕುಮ್ಕಿ ಭೂಮಿ ಕೈಬಿಡಲಾಗಿದೆ. ಹೊಸದಾಗಿ ಸರ್ವೆ ನಡೆಸಿದ್ದರಿಂದ 65 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಭೂಮಿ ಈಗ 13 ಸಾವಿರ ಹೆಕ್ಟೇರಿಗೆ ವ್ಯಾಪ್ತಿಗೆ ಇಳಿದಿದೆ ಎಂಬ ಮಾಹಿತಿ ನೀಡಿದರು.
ತಾಪಂ. ಜಿಪಂ. ಮೀಸಲಾತಿಯಲ್ಲಿ ಸರಕಾರದ ಹಸ್ತಕ್ಷೇಪವಿಲ್ಲ
ತಾಪಂ. ಜಿಪಂ. ಅಧ್ಯಕ್ಷ ಉಪಾಧ್ಯಕ್ಷ ಮೀಸಲು ಇನ್ನೂ ಪ್ರಕಟವಾಗಿಲ್ಲ. ಮೀಸಲು ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದ್ದು, ತಾಪಂ ಜಿಪಂ ಹಿಂದಿನ ಬಾಗಿಲಿನಿಂದ ಅಧಿಕಾರಿ ಹಿಡಿಯುವುದು ಎಲ್ಲಿ ಬಂತು. ಜನ ಸಂಖ್ಯೆ ಆಧಾರದಲ್ಲಿ ಮೀಸಲು ಪ್ರಕಟವಾಗಲಿದೆ. ಸರಕಾರ ಹಸ್ತಕ್ಷೇಪ ಇದರಲ್ಲಿ ಮಾಡೋದಿಲ್ಲ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಜನತಾದರ್ಶನದಲ್ಲಿ ಸಮಸ್ಯೆ ಬಗೆಹರಿಸಲು ಆದ್ಯತೆ
ಅತೀ ಹೆಚ್ಚು ಕಂದಾಯ, ಕುಮ್ಕಿ, 94ಸಿ, ಕುಡಿಯುವ ನೀರು, ಜಾಗದ ಡಿಸ್ಬ್ಯೂಟ್, ಸಂಪರ್ಕ ರಸ್ತೆ, ಮೆಸ್ಕಾಂಗಳ ಬಗ್ಗೆ ಸಮಸ್ಯೆ ಆಲಿಸಿ, ತಾಲೂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಇಲ್ಲಿ ಸಾಧ್ಯವಾಗದ್ದಕ್ಕೆ ಸರಕಾರದ ಮಟ್ಟದಲ್ಲಿ ಪರಿಹಾರ ದೊರಕಿಸಿಕೊಡಲಾಗುತ್ತದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿಧಾನ ಸಭಾ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮೀನಿಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಹಿರಿಯಣ್ಣ, ಮಾಜಿ ಜಿಪಂ ಅಧ್ಯಕ್ಷ ರಾಜು ಪೂಜಾರಿ, ತಹಸೀಲ್ದಾರ್ ಗಾಯತ್ರಿ ನಾಯ್ಕ್, ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.