Kundapra.com ಕುಂದಾಪ್ರ ಡಾಟ್ ಕಾಂ

ಚುನಾವಣೆಗೆ ಕುಂದಾಫುರ ತಾಲೂಕು ಸಿದ್ಧ: 128 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾನೆ ಮತದಾರ ಪ್ರಭು

ತಾಲೂಕಿನಲ್ಲಿ ಒಟ್ಟು 356 ಮತಗಟ್ಟೆ. ಸೂಕ್ಷ್ಮ 56, ಅತೀಸೂಕ್ಷ್ಮ 13 ನಕ್ಸಲ್ ಪೀಡಿತ ಪ್ರದೇಶ 27

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ರಾಜ್ಯದ ಎರಡನೇ ಹಂತದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಕುಂದಾಪುರ ತಾಲೂಕು ಸಿದ್ಧಗೊಂಡಿದ್ದು. ಶಾಂತಿಯುತ ಚುನಾವಣೆ ನಡೆಸುವ ಸಲುವಾಗಿ ಸಕಲ ಏರ್ಪಾಡುಗಳನ್ನು ಮಾಡಲಾಗಿದೆ. ತಾಲೂಕಿನಲ್ಲಿ 13 ಅತಿಸೂಕ್ಷ್ಮ, 56 ಸೂಕ್ಷ್ಮ ಹಾಗೂ 27 ನಕ್ಸ್‌ಲ್ ಪೀಡಿತ ಮತಗಟೆ ಹಾಗೂ, 260 ಸಾಮಾನ್ಯ ಮತಗಟ್ಟೆಗಳೆಂದು ವಿಭಾಗಿಸಲಾಗಿದೆ. ಅತಿಸೂಕ್ಷ್ಮ ಮತಗಟ್ಟೆಗಳ ಪೈಕಿ ಶಿರೂರು ಜಿ.ಪಂ. ಕ್ಷೇತ್ರದ 4, ತ್ರಾಸಿ ಜಿಪಂ1, ವಂಡ್ಸೆ ಜಿಪಂ 1, ಕಾವ್ರಾಡಿ ಜಿಪಂ 2 , ಕೋಟೇಶ್ವರ ಜಿಪಂನಲ್ಲಿ 3, ಸಿದ್ದಾಪುರ ಜಿಪಂ ಕ್ಷೇತ್ರದಲ್ಲಿ 2 ಹೀಗೆ ಒಟ್ಟು 13 ಅತಿಸೂಕ್ಷ್ಮ ಮತಗಟ್ಟೆಗಳ ಗುರುತಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಮತದಾನ ಕಾರ್ಯಕ್ಕೆ ತಾಲೂಕಿನಲ್ಲಿ 393 ಪ್ರಿಸೈಡಿಂಗ್ ಆಫೀಸರ್, 392 ಅಸಿಸ್ಟೆಂಟ್ ಪ್ರಿಸೈಡಿಂಗ್ ಆಫೀಸರ್, 1176 ಪೋಲಿಂಗ್ ಆಫೀಸರ್ ಹಾಗೂ 392 ಗ್ರೂಫ್ ಡಿ ಸೇರಿದಂತೆ ಒಟ್ಟು 3,272 ಮಂದಿ ಸಿಬಂಧಿಗಳು ಕರ್ತವ್ಯ ನಿರ್ವಹಿಸಲಿದ್ದು, ಮತ ಕೇಂದ್ರದಲ್ಲಿ 1780 ಸಿಬ್ಬಂದಿ ಜೊತೆ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಓರ್ವ ಡಿ ದರ್ಜೆ ಸಿಬ್ಬಂದಿ ಇರಲಿದ್ದಾರೆ. ಜೊತೆಗೆ 24 ಸೆಕ್ಟರ್ ಆಫೀಸರ್, 15 ಮಾಸ್ಟರ್ ಟ್ರೈನರ್ ಮತ್ತು 6 ಎ.ವಿ.ಎಂ. ಕಾರ್ಯನಿರ್ವಹಿಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ತಾಲೂಕಿನಲ್ಲಿ ಒಟ್ಟು 10 ಜಿ.ಪಂ. ಕ್ಷೇತ್ರಗಳಿಗೆ 29 ಅಭ್ಯರ್ಥಿಗಳು ಸ್ವರ್ಧಿಸುತ್ತಿದ್ದರೇ, 37 ತಾ.ಪಂ. ಕ್ಷೇತ್ರಗಳಿಗೆ99 ಮಂದಿ ಅಭ್ಯರ್ಥಿಗಳಿದ್ದಾರೆ ಸ್ವರ್ಧಿಸುತ್ತಿದ್ದಾರೆ, ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಪ್ರಭುಗಳು ನಿರ್ಧರಿಸಲಿದ್ದಾರೆ. ಕುಂದಾಪುರ ತಾಲೂಕಿನಲ್ಲಿ ಒಟ್ಟು 3,05,471 ಮತದಾರರಿದ್ದಾರೆ. ಚುನಾವಣೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು, ಮಸ್ಟರಿಂಗ್ ಹಾಗೂ ಡೀಮಸ್ಟರಿಂಗ್ ಕುಂದಾಪುರದ ಭಂಡಾರ್‌ರ್ಕಾಸ್ ಕಾಲೇಜಿನಲ್ಲಿ ನಡೆಯುತ್ತದೆ. ಕುಂದಾಪ್ರ ಡಾಟ್ ಕಾಂ ವರದಿ

ಇದನ್ನೂ ಓದಿ:
► ಕುಂದಾಫುರ ತಾಲೂಕು ಜಿಪಂ ಕ್ಷೇತ್ರ ಪರಿಚಯ – http://kundapraa.com/tag/tp-zp-election/
► ಕುಂದಾಪುರ ಜಿಪಂ-ತಾಪಂ ಚುನಾವಣೆ: ಮಹಿಳಾ ಮತದಾರರದ್ದೇ ಮೇಲುಗೈ – http://kundapraa.com/?p=11351

Exit mobile version