ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕೇಂದ್ರ ಲೋಕಸೇವಾ ಆಯೋಗವು ನಾಗರಿಕ ಸೇವಾ ಪರೀಕ್ಷೆಯ 2015ನೇ ಸಾಲಿನ ಫಲಿತಾಂಶ ಪ್ರಕಟಿಸಿದ್ದು ಕುಂದಾಪುರ ಮೂಲದ ನಿವ್ಯಾ ಪಿ. ಶೆಟ್ಟಿ 274ನೇ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವ್ಯಾ ಶೆಟ್ಟಿ ಕುಂದಾಪುರ ತಾಲೂಕಿನ ತೊಂಭಟ್ಟು ಮಾಜಿ ಪಟೇಲ್ ಸದಾಶಿವ ಶೆಟ್ಟಿ ಅವರ ಪುತ್ರ ಮಾಜಿ ಸರಕಾರಿ ಅಭಿಯೋಜಕ ಪ್ರಕಾಶ್ ಶೆಟ್ಟಿ ಅವರ ಪುತ್ರಿಯಾಗಿದ್ದಾರೆ. ರ‍್ಯಾಂಕ್ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಿವ್ಯಾ ಶೆಟ್ಟಿ ತೇರ್ಗಡೆ ಹೊಂದಿರುವ ಬಗ್ಗೆ ಹೆಮ್ಮೆ ಇದೆ. ಈ ಮೂಲಕ ಸಾಧನೆಗೊಂದು ಆರಂಭ ದೊರಕಿದಂತಾಗಿದೆ. ದೇಶ ಸೇವೆಗಾಗಿ ಮುಂದಿನ ಬದುಕನ್ನು ಮುಡಿಪಾಗಿಸುತ್ತೇನೆ. ಈ ಸಾಧನೆ ಮಾಡಲು ಕಾರಣರಾದ ತನ್ನ ಪೋಷಕರನ್ನು ಸ್ಮರಿಸುತ್ತೇನೆ ಎಂದ್ದಿದ್ದಾರೆ.

