Kundapra.com ಕುಂದಾಪ್ರ ಡಾಟ್ ಕಾಂ

ಚದುರಂಗದ ನಿಯಮ ಜೀವನಕ್ಕೆ ಕೂಡ ಅನ್ವಯವಾಗುತ್ತದೆ: ರಾಘವೇಂದ್ರ ಉಪಾಧ್ಯಾಯ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ಇವರ ನೂತನ ಕಛೇರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಚ್ಚಿಲ ಮಹಾಲಕ್ಷ್ಮಿ ಧರ್ಮದರ್ಶಿ ರಾಘವೇಂದ್ರ ಉಪಾಧ್ಯಾಯ ಮಾತನಾಡಿ ಚದುರಂಗದ ನಿಯಮಗಳಲ್ಲಿ ಬರುವ ನೀತಿ ನಿರ್ಬಂಧನೆಗಳು ಮನುಷ್ಯನು ತನ್ನ ಜೀವನದಲ್ಲಿ ಕೂಡ ಅಳವಡಿಸಿಕೊಳ್ಳಬೇಕು ಎಂದರು. ಮಹಾಭಾರತದ ಕಾಲದಿಂದಲೂ ಚದುರಂಗಕ್ಕೆ ಪ್ರಮುಖ ಸ್ಥಾನವನ್ನು ಕೊಟ್ಟಿದ್ದಾರೆ ಎಂದು ನುಡಿದರು.

ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಡೆರಿಕ್ ಚೆಸ್ ಸ್ಕೂಲ್ ಮಂಗಳೂರು ಸಂಸ್ಥಾಪಕ ಡೆರಿಕ್ ಪಿಂಟೋ ಮಾತನಾಡಿ, ಚೆಸ್ ಕೇವಲ ಕ್ರೀಡೆಯಲ್ಲ ಮನೋರಂಜನೆಯ ಬೆಳಕು ಕುಂದಾಪುರದಲ್ಲಿ ಒಬ್ಬ ಹೊಸ ಚೆಸ್ ಗ್ರಾಂಡ್ ಮಾಸ್ಟರ್ ಹುಟ್ಟಿ ಬರಲೆಂದು ಆಶಿರ್ವದಿಸಿದರು. ಹಾಗೆ ಈ ಸಂಧರ್ಭದಲ್ಲಿ ಎರೋಸ್ ಗ್ರೂಪ್ ದುಬೈ ಮಾರ್ಕೆಟಿಂಗ್ ಮ್ಯಾನೇಜರ್ ನಂದೀಶ್ ರಾವ್, ಅಂತಾರಾಷ್ಟ್ರೀಯ ಮಟ್ಟ ಚೆಸ್ ತರಬೇತಿಗಾರ ಪ್ರಸನ್ನ ರಾವ್, ಕುಂದಾಪುರ ಪುರಸಭೆ ವಸಂತಿ ಸಾರಂಗ್, ಜೆ ಸಿ ಐ ವಿಷ್ಣು, ಶಾರದಾ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ ದೈಹಿಕ ಶಿಕ್ಷಕರಾದ ಸುಜಾಜ್ ಶೆಟ್ಟಿ, ಕಟ್ಟಡದ ಮಾಲೀಕ ವಿಮಲೇಶ್ ಶೇಟ್ ಮುಂತಾದವರು ಉದ್ಘಾಟಿಸಿದರು.

ಕಶ್ವಿ ಚೆಸ್ ಸ್ಕೂಲ್ ನ ವ್ಯವಸ್ಥಾಪಕ ನರೇಶ್ ಬಿ ಇವರು ಪ್ರಸ್ತಾವ ನುಡಿಗೈದರು ಅಕ್ಷತಾ ಗಿರೀಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಸದಸ್ಯನಾದ ಪ್ರದೀಪ್ ರಾವ್ ಸ್ವಾಗತಿಸಿ, ಮೇಘನಾ ಪ್ರಭು ಧನ್ಯವಾದಗೈದರು.

Exit mobile version