ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಶ್ವಿ ಚೆಸ್ ಸ್ಕೂಲ್ʼನಲ್ಲಿ ಎಪ್ರಿಲ್ 1 ರಿಂದ ಚೆಸ್ ತರಬೇತಿ ಪುನರಾರಂಭಗೊಳ್ಳಲಿದ್ದು, ರಾಷ್ಟ್ರೀಯ ತರಬೇತುದಾರರಾದ ನರೇಶ್ ರಾವ್ ಮತ್ತು ಗುರುರಾಜ್ ಶೆಟ್ಟಿಯವರು ತರಬೇತಿಯನ್ನು ನೀಡಲಿದ್ದಾರೆ.
ಈಗಾಗಲೇ ಕುಂದಾಪುರ ತಾಲ್ಲೂಕಿನ ಒಟ್ಟು 958 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು ಜಮ್ ಶೆಡ್ ಪುರದಲ್ಲಿ ನಡೆದ ಟಾಟಾ ಸ್ಟೀಲ್ ಏಷ್ಯನ್ ಜೂನಿಯರ್ ಓಪನ್ ಮತ್ತು ಗರ್ಲ್ಸ್ ಚೆಸ್ ಚಾಂಪಿಯನ್ಶಿಪ್-2023 ರಲ್ಲಿ ನಮ್ಮ ವಿದ್ಯಾರ್ಥಿಗಳಾದ ದಿಶಾ ಯು.ಎ ( ಉಡುಪಿ), ದಿವ್ಯಾ ( ಕುಂದಾಪುರ) ತೇಜಸ್ ಕೆ ( ಬೆಂಗಳೂರು)ಮತ್ತು ನಿಶಾಂತ್ ಡಿಸೋಜಾ (ಕೋಡಿ, ಕುಂದಾಪುರ) ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರು
ಪ್ರಸಕ್ತ ವರ್ಷದಲ್ಲಿ ಕ್ರಿಸಲ್ ವಿಯೊಲಾ ವಾಸ್ (ಮಂಗಳೂರು) ಪ್ರದೀಪ್ ಪಾಟೀಲ್(ಕಲಬುರಗಿ), ಓಸ್ವಿನ್ ಜೋಶುವಾ ಡಿಮೆಲ್ಲೊ (ಕೋಡಿ,ಕುಂದಾಪುರ) ತೇಜಸ್ ಎಂ ಶೆಣೈ (ತೀರ್ಥಹಳ್ಳಿ) ಕಾರ್ತಿಕ್ ಆರ್ (ಕುಂದಾಪುರ) ದಿಶಾ ಯು.ಎ ( ಉಡುಪಿ) ಮತ್ತು ಛಾಯ ಸಿ ಪೂಜಾರಿ (ಕುಂದಾಪುರ) ರಾಷ್ಟಮಟ್ಟದ ಶಾಲಾ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯ ಚೆಸ್ ತಂಡವನ್ನು ಪ್ರತಿನಿಧಿಸಿದರು, 2023-24 ರ ಸಾಲಿನಲ್ಲಿ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರದ ಮಹಿಳಾ ಚೆಸ್ ತಂಡವು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆಯಿತು ಮತ್ತು ಚೆನೈನಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ಚೆಸ್ ಚಾಂಪಿಯನ್ ಶಿಪ್ ನಲ್ಲಿ ದಿವ್ಯ ರವರು ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಚೆಸ್ ತಂಡವನ್ನು ಪ್ರತಿನಿಧಿಸಿದರು.
ಸಿಲಾಸ್ ಇಂಟರ್ನ್ಯಾಷನಲ್ ಸ್ಕೂಲ್,ಉಡುಪಿಯಲ್ಲಿ ನಡೆದ ಸಿ.ಬಿ.ಎಸ್.ಸಿ ಯವರ (ಎ.ಐ.ಸಿ.ಎಸ್) ಉಡುಪಿ ಅಂತರ್ ಶಾಲಾ ಚೆಸ್ ಚಾಂಪಿಯನ್ಶಿಪ್ (ಹಿರಿಯರ ತಂಡ) ನಲ್ಲಿ ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ ಚಾಂಪಿಯನ್ ಪ್ರಶಸ್ತಿಯನ್ನು ಗಳಿಸಿತು.
ಈ ಚಾಂಪಿಯನ್ಶಿಪ್ನಲ್ಲಿ ನಮ್ಮ ವಿದ್ಯಾರ್ಥಿಗಳಾದ ಶಮಂತ್ ಬಿ ಶೆಟ್ಟಿ ಈ ತಂಡದ ನಾಯಕರಾಗಿ 2ನೇ ಬೋರ್ಡ್ ಚಾಂಪಿಯನ್ ಪ್ರಶಸ್ತಿ ಮತ್ತು ಆರಾಧ್ಯ ಎಸ್ ಶೆಟ್ಟಿ 3ನೇ ಬೋರ್ಡ್ ಚಾಂಪಿಯನ್ ಪ್ರಶಸ್ತಿ ಪಡೆದರು.
ಈ ಬಾರಿ ನಮ್ಮ ಸಂಸ್ಥೆಯ ಮೂಲಕ ಅಂತರ್ ಜಿಲ್ಲಾ ರ್ಯಾಪಿಡ್ ಚೆಸ್ ಪಂದ್ಯಾವಳಿಯನ್ನು ಮತ್ತು ಕರ್ನಾಟಕ ರಾಜ್ಯ ಮಟ್ಟದ ಶಾಲಾ ಚೆಸ್ ಚಾಂಪಿಯನ್ ಶಿಪ್ ನಡೆಸಲು ತಿರ್ಮಾನಿಸಿದ್ದೇವೆ.
ವಿದ್ಯಾರ್ಥಿಗಳು ಇದರ ಸದವಕಾಶವನ್ನು ಪಡೆಯುವಂತೆ ಕಶ್ವಿ ಚೆಸ್ ಸಂಸ್ಥಾಪಕರಾದ ನರೇಶ್ ರಾವ್ ರವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ
ಸಂಪರ್ಕಿಸಿ: 789996906̧3 https://kashvichessschool.in/