ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಶ್ವಿ ಚೆಸ ಸ್ಕೂಲ್‌ನ ಮೊದಲ ವಾರ್ಷಿಕೋತ್ಸವ ಹಾಗೂ ಅಂತರಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ ಆರ್. ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರ್ಜುನ ಪ್ರಶಸ್ತಿ ವಿಜೇತ ಪ್ರವೀಣ್ ತಿಪ್ಸೆ ಚೆಸ್‌ನ ಬಗ್ಗೆ ಮಾಹಿತಿ ನೀಡಿ ಹುಮಾನವನ್ನು ವಿತರಿಸಿದರು ಪ್ರೆಸಿಡೆಂಟ್ ಗ್ರೂಫ್‌ನ ಇಸ್ಮಾಯಿಲ್ ಸಾಹೇಬ್, ಬಸ್ರೂರು ಶಾರದಾ ಆಂಗ್ಲ ಮಾಧ್ಯಮ ಸ್ಕೂಲ್‌ನ ಸಂಚಾಲಕರು ಅರುಣ್ ಕುಮಾರ್ ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯ ಸಂಚಾಲಕರು ಅನುಪಮ ಶೆಟ್ಟಿ, ಬಸ್ರೂರು ಶಾರಾದಾ ಕಾಲೇಜಿನ ಮಾಜಿ ಪ್ರಾಂಶುಪಾಲರು ಚಂದ್ರಪ್ರಭಾ ಹೆಗ್ಡೆ , ಸುಬ್ರಮಣ್ಯ ಶೆಟ್ಟಿಗಾರ್ ಕೋಟೇಶ್ವರ ಕುಂದಾಪುರ ಆರಕ್ಷಕ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ನಾಸಿರ್ ಹುಸೇನ್, ಡೇರಿಕ್ ಚೆಸ್ ಸೂಕ್ಕಲ್‌ನ ಡೇರಿಕ್ ಫಿಂಟೋ, ಪ್ರಸನ್ನ ರಾವ್ ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ಆಂಡ್ರಿಯಾ ಡಿಸೋಜಾ ಕಶ್ವಿ ಚೆಸ್ ತರಬೇತುದಾರ ಗುರುರಾಜ್ ಶೆಟ್ಟಿ. ಕಶ್ವಿ ಸ್ಕೂಲ್ ಚೆಸ್‌ನ ವ್ಯವಸ್ಥಾಪಕರು ನರೇಶ್ ಬಿ. ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.
ಈ ಪಂದ್ಯಾಟ ಕೂಟದಲ್ಲಿ ೩೩೧ ಸ್ಪರ್ಧಾಳುಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಕಶ್ವಿ ಸ್ಕೂಲ್ ಚೆಸ್‌ನ ಆಟಗಾರರಿಗೆ ಸ್ಕಾಲರ್‌ಶಿಪನ್ನು ನೀಡಲಾಯಿತು ಚೆಸ್ ಸಾಧಕರಿಗೆ ಸನ್ಮಾನಿಸಲಾಯಿತು.