Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸ್ವತಂತ್ರ ಆಗಸದಲ್ಲಿ ಹಾರಲು ಸಜ್ಜಾಗಿದೆ ತಿರಂಗಾ ಬಾವುಟ

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಹತ್ತಿರ ಬರುತ್ತಿದ್ದಂತೆ ಬಾವುಟಗಳ ಮಾರಾಟ ಆರಂಭಗೊಳ್ಳುತ್ತವೆ. ಶಾಲಾ ಕಾಲೇಜು, ಕಛೇರಿ, ವಾಹನ, ಮಕ್ಕಳು ಹೀಗೆ ಎಲ್ಲರಿಗಾಗಿಯೂ ವಿವಿಧ ಗಾತ್ರದ ಬಾವುಟಗಳಂತೂ ಬೇಕೆಬೇಕು. ಕುಂದಾಪುರದ ಹಳೆ ಬಸ್‌ಸ್ಟ್ಯಾಂಡಿನ ಬಳಿ ಹಳೆದ ಹದಿನೈದು ವರ್ಷಗಳಿಂದ ಅದೇ ಹಳೆಯ ಕಟ್ಟದ ಮುಂಭಾಗದಲ್ಲಿ ತಾತ್ಕಾಲಿಕವಾಗಿ ಕಾಣಸಿಗುವ ಅಬ್ದುಲ್‌ರ ಅಂಗಡಿಯಲ್ಲಿನ ತ್ರಿವರ್ಣ ಧ್ವಜಗಳಿಗಂತೂ ಕುಂದಾಪುರದಲ್ಲಿ ಭಾರಿ ಬೇಡಿಕೆ.

10ರೂಪಾಯಿಂದ ಆರಂಭಗೊಂಡು 500 ರೂಪಾಯಿ ವರೆಗಿನ ವಿವಿಧ ಗಾತ್ರದ ತ್ರಿವರ್ಣ ಧ್ವಜಗಳು ಈ ಮಾರ್ಗದಲ್ಲಿ ಸಾಗುವವನ್ನು ಒಂದು ಕ್ಷಣ ಆಕರ್ಷಿಸುತ್ತವೆ. ಪ್ರತಿವರ್ಷವೂ ಇಲ್ಲಿಯೇ ಸುಮಾರು ೬,೦೦೦ ಬಾವುಟಗಳು ಮಾರಾಟವಾಗುತ್ತಿವೆ. ಕಳೆದ ಹದಿನೈದು ವರ್ಷಗಳಿಂದಲೂ ನಡೆದು ಬಂದಿರುವ ಈ ಬಾವುಟದ ಮಾರಾಟ ಕೇವಲ ಲಾಭಕ್ಕಷ್ಟೇ ಅಲ್ಲ. ಅದೊಂದು ಹವ್ಯಾಸವಾಗಿದೆ ಎನ್ನುತ್ತಾರೆ ವ್ಯಾಪಾರಿ ಅಬ್ದುಲ್. ಕುಂದಾಪ್ರ ಡಾಟ್ ಕಾಂ ವರದಿ

ಒಂದು ಕಾಲದಲ್ಲಿ ಬಾವುಟಗಳಿಗೆ ದುಪ್ಪಟ್ಟು ಹಣ ನೀಡಬೇಕಿದ್ದುದನ್ನು ಕಂಡ ಅಬ್ದುಲ್ ಅವರೇ ಸ್ವತಃ ಕಡಿಮೆ ಬೆಲೆಗೆ ಬಾವುಟ ಮಾರಲು ಮುಂದಾದರು. 300-400 ಬಾವುಟಗಳಿಂದ ಆರಂಭಿಸಿ ಇಂದು 6000 ಬಾವುಟಗಳನ್ನು ಮಾರಾಟ ಮಾಡುತ್ತಿದ್ದಾರೆ. ವರ್ಷದಲ್ಲಿ ಕೆಲವು ದಿನಗಳನ್ನು ಇದಕ್ಕೆಂದೇ ವ್ಯಯಿಸಿ ಸಂತೃಪ್ತಿ ಕಾಣುತ್ತಿದ್ದಾರೆ. ಗಂಗೊಳ್ಳಿಯವರಾದ ಅಬ್ದುಲ್, ಕುಂದಾಪುರದ ಹಂಗಳೂರಿನಲ್ಲಿ ನೆಲೆಸಿದ್ದು, ಪೇಟ, ಬಾವುಟ ಮಾರಾಟದೊಂದಿಗೆ ಇತರ ಉದ್ಯೋಗ ಮಾಡಿಕೊಂಡಿದ್ದಾರೆ.

ಕುಂದಾಪುರಕ್ಕೆ ಮೊದಲು ರೆಡೆಮೇಡ್ ಪಾಲಿಸ್ಟರ್ ಪೇಟ ಪರಿಚಯಿಸಿದ್ದರು:
ಮೊದಲೆಲ್ಲಾ ಮದುವೆಯ ಸಂದರ್ಭದಲ್ಲಿ ಮದುಮಗನಿಗೆ ನೇರಳೆ ಬಣ್ಣದ ಕಾಟನ್ ಬಟ್ಟೆಯಿಂದ ಪೇಟವನ್ನು ಕಟ್ಟುವ ಪರಿಪಾಠವಿತ್ತು. ೧೯೮೫ರ ಸುಮಾರಿಗೆ ಅಬ್ದುಲ್ ಮೊದಲ ಬಾರಿಗೆ ಮದುಮಗನ ಪೇಟಕ್ಕೆ ನೇರಳೆ ಬಣ್ಣದ ಕಾಟನ್ ಬಟ್ಟೆಯ ಬದಲಿಗೆ ಕ್ರೀಮ್ ಬಣ್ಣದ ಪಾಲಿಸ್ಟರ್ ರೇಡಿಮೆಡ್ ಪೇಟವನ್ನು ತಯಾರಿಸಿದ್ದರು. ಆಗಷ್ಟೇ ಮದುವೆ ಸಮಾರಂಭಗಳಿಗೆ ವಿಡಿಯೋ ಪರಿಚಯವಾಗುತ್ತಿದ್ದ ಕಾಲದಲ್ಲಿ ಇವರ ರೆಡೆಮೇಡ್ ಪೇಟ್ ಮದುಮಗನಿಗೆ ವಿಶೇಷ ಮೇರಗು ನೀಡಿದಂತಾಗುತ್ತಿತ್ತು. ಹಾಗಾಗಿ ಇವರ ಪೇಟಗಳಿಗೂ ಭಾರಿ ಬೇಡಿಕೆ ಬಂದಿದ್ದವು. ಮಂಗಳೂರಿನ ಕುಲ್ಯಾಡಿಕಲ್ ಬಟ್ಟೆಮಳಿಗೆಯಲ್ಲಿ ಇವರು ತಯಾರಿಸುತ್ತಿದ್ದ ಪೇಟಕ್ಕೆ ಭಾರಿ ಬೇಡಿಕೆ ಇದ್ದವು/ಕುಂದಾಪ್ರ ಡಾಟ್ ಕಾಂ ವರದಿ/

Exit mobile version