Kundapra.com ಕುಂದಾಪ್ರ ಡಾಟ್ ಕಾಂ

8 ಕಂದಮ್ಮಗಳ ಬಲಿ ಪಡೆದ ಮೊವಾಡಿ ಕ್ರಾಸ್ ದುರಂತಕ್ಕೆ 1 ವರ್ಷ. ಬದಲಾಗಿಲ್ಲ ಪರಿಸ್ಥಿತಿ.

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ತಾಲೂಕಿನ ತ್ರಾಸಿ ಮೊವಾಡಿ ಕ್ರಾಸ್ ಬಳಿ ಭೀಕರ ಅಪಘಾತ ಘಟಿಸಿ ಒಂದು ವರ್ಷ ಸಂದಿದೆ. ಸುರಿಯುತ್ತಿದ್ದ ಮಳೆಯಲ್ಲಿ ಯಮರೂಪಿಯಾಗಿ ಬಂದ ಬಸ್ಸಿಗೆ ಎಂಟು ಶಾಲಾ ಮಕ್ಕಳು ಬಲಿಯಾಗಿ ಕನಸುಗಳೊಂದಿಗೆ ಕಮರಿಹೋಗಿದ್ದರು. ಹೆಮ್ಮಾಡಿ ಕಡೆಯಿಂದ ಮಕ್ಕಳನ್ನು ಹತ್ತಿಸಿಕೊಂಡು ಬಂದ ಓಮ್ನಿ ಮೋವಾಡಿ ಕ್ರಾಸ್‌ನ ಡಾನ್ ಬಾಸ್ಕೋ ಶಾಲೆಗೆ ತಿರುಗುತ್ತಿದ್ದ ಸಂದರ್ಭ ಗಂಗೊಳ್ಳಿ ಕಡೆಯಿಂದ ಬಂದ ಬಸ್ಸು ಡಿಕ್ಕಿ ಹೊಡೆದಿತ್ತು. ಅಪಘಾತದ ಗಂಭೀರತೆಗೆ ಎರಡು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಆರು ಮಕ್ಕಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು.

ಎಳೆಯ ಕಂದಮ್ಮಗಳಿಗಾಗಿ ನಾಡು ಮಮ್ಮಲ ಮರುಗಿತ್ತು. ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು. ಮಕ್ಕಳನ್ನು ಕಳೆದಕೊಂಡ ಕುಟುಂಬ ಮಾತ್ರ ಇನ್ನು ಆ ಆಘಾತದಿಂದ ಹೊರಗೆ ಬಂದಿಲ್ಲ. ಆದರೆ ಅಪಘಾತದ ಸಮಯದಲ್ಲಿ ಅನುಸರಿಸಲಾದ ಸುರಕ್ಷಾ ಕ್ರಮಗಳು ಕೆಲವು ತಿಂಗಳಿಗಷ್ಟೇ ಸೀಮಿತವಾಗಿ ಮತ್ತ ಯಥಾ ಸ್ಥಿತಿಗೆ ತಲುಪಿರುವುದು ಮಾತ್ರ ದುರಂತ.

ಆಘಾತದಿಂದ ಹೊರಬಂದಿಲ್ಲ ಕುಟುಂಬ:
ಮೃತ ಮಕ್ಕಳ ಪೈಕಿ ಕ್ಲಾರಿಸಾ, ಕೆಲಿಸ್ತಾ, ಅಲ್ವಿಟಾ, ಎನಿಸ್ಟಾ, ಅನನ್ಯ, ನಿಖಿತಾ, ರಾಯಸ್ಟನ್, ಡೆಲ್ವಿನ್, ಎಲ್ಲರೂ ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿ ವಿದ್ಯಾರ್ಥಿಗಳು. ಹೆಮ್ಮಾಡಿ ಮೂವತ್ತುಮುಡಿ ಪರಿಸರದವರು. ಈ ಪೈಕಿ ಕ್ಲಾರಿಸಾ – ಕೆಲಿಸ್ತಾ, ಅಲ್ವಿಟಾ – ಎನಿಸ್ಟಾ, ಅನನ್ಯ -ನಿಖಿತಾ ಸಹೋದರಿಯರು. ಎಲ್ಲರೂ ಹತ್ತಿರದ ಸಂಬಂಧಿಗಳಾಗಿದ್ದರು. ಮಕ್ಕಳನ್ನು ಕಳೆದುಕೊಂಡ ಹೆತ್ತವರ ರೋಧನ ಇನ್ನೂ ನಿಂತಿಲ್ಲ. ದುರ್ಘಟನೆಯಲ್ಲಿ ಬದುಕುಳಿದ ಒಂಬತ್ತು ಮಕ್ಕಳು ಘಟನೆಯನ್ನು ನೆನದರೆ ಭಯಬೀಳುತ್ತಾರೆ ಇಬ್ಬಿಬ್ಬರು ಮಕ್ಕಳನ್ನು ಕಳೆದುಕೊಂಡ ಮೂರು ಕುಟುಂಬದ ಪೈಕಿ ಎರಡು ಕುಟುಂಬ ಘಟನೆಯನ್ನು ಮರೆಯಲು ಊರು ಬಿಟ್ಟು ತೆರಳಿದ್ದಾರೆ. ಒಂದು ಕುಟುಂಬ ಘಟನೆಯನ್ನು ಮರೆಯಲಾಗದೇ ಯಾರೊಂದಿಗೂ ಮಾತನಾಡಲಾಗದ ಸ್ಥಿತಿಯಲ್ಲಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಪರಿಸ್ಥಿತಿ ಯಥಾಸ್ಥಿತಿ:
ಭೀಕರ ಅಪಘಾತ ನಡೆದು ಕೆಲವು ದಿನಗಳ ಕಾಲ ದಿನ ಶಾಲಾ ವಾಹನಗಳ ತಪಾಸಣೆ ಕಾರ್ಯ ಕೈಗೊಳ್ಳಲಾಗಿತ್ತು. ಕೆಲವು ದಿನಗಳಿಗಷ್ಟೇ ಸೀಮಿತವಾದ ಕಾರ್ಯಚರಣೆ ಮತ್ತೆ ಹೇಳ ಹೆಸರಿಲ್ಲದಂತಾಗಿದೆ. ಈ ಭಾರಿ ಶಾಲಾ ಆರಂಭಗೊಂಡು ಯಥಾಸ್ಥಿತಿಯಲ್ಲಿ ಶಾಲಾ ವಾಹನಗಳಲ್ಲಿ ಅಧಿಕ ಮಕ್ಕಳು ತೆರಳುತ್ತಿರುವುದು, ಬಸ್ ಪುಟ್‌ಬೋರ್ಡ್‌ನಲ್ಲಿ ನಿಂತು ತೆರಳುತ್ತಿರುವುದು ನಡೆಯುತ್ತಿದ್ದರೂ ಇಲಾಖೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮೊವಾಡಿ ಕ್ರಾಸ್ ಶಾಲಾ ತಿರುವು ಇದ್ದರೂ ಯಾವುದೇ ಸೂಚನಾ ಫಲಕವಿಲ್ಲ. ಹೆದ್ದಾರಿ ಮೇಲೆದ್ದ ಬ್ಯಾರಿಕೇಡ್ ಸರಿಸಲಾಗಿದೆ. ವೇಗ ನಿಯಂತ್ರಕ ಅಳವಡಿಕೆ ಮಾಡುವುದು ಭರವಸೆಯಾಗಿಯೇ ಉಳಿದಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಇದನ್ನೂ ಓದಿ:
ಕುಂದಾಪುರ ಹೆಮ್ಮಾಡಿಯಲ್ಲಿ ಕರಗಿಲ್ಲ ಸ್ಮಶಾನ ಮೌನದ ಕಾರ್ಮೋಡ – http://kundapraa.com/?p=15141
► ಅಪಘಾತದಲ್ಲಿ ಮಡಿದ ಮಕ್ಕಳಿಗೆ ಮುಸ್ಲಿಬಾಂಧವರಿಂದ ಶ್ರದ್ಧಾಂಜಲಿ – http://kundapraa.com/?p=15196
ಸ್ಕೂಲ್ ವ್ಯಾನ್ ಅಫಘಾತದಲ್ಲಿ ಮಡಿದ ಮಕ್ಕಳ ಅಂತಿಮ ವಿಧಿ ಗಂಗೊಳ್ಳಿ, ತಲ್ಲೂರು ಚರ್ಚಿನಲ್ಲಿ ಪೂರ್ಣ – http://kundapraa.com/?p=15166
► ಕುಂದಾಪುರ: ಗಾಯಗೊಂಡಿದ್ದ ಮಕ್ಕಳ ಆರೋಗ್ಯ ಚೇತರಿಕೆ. ಅಸ್ಪತ್ರೆಯಿಂದ ಡಿಸ್ಚಾರ್ಜ್ – http://kundapraa.com/?p=15163
ಕುಂದಾಪುರ: ಶಾಲಾ ವಾಹನಗಳ ತಪಾಸಣೆ, ನಿಯಮ ಮೀರಿದ್ದಕ್ಕೆ ಕಾನೂನು ಕ್ರಮ – http://kundapraa.com/?p=15160
► ಮೃತ ಮಕ್ಕಳ ಮನೆಯಲ್ಲಿ ಮಡುಗಟ್ಟಿದ ಮೌನ, ಗಂಗೊಳ್ಳಿ, ತಲ್ಲೂರಿನಲ್ಲಿ ಅಂತಿಮ ವಿಧಿ – http://kundapraa.com/?p=15159
ಕುಂದಾಪುರ: ಅಸ್ಪತ್ರೆ, ಮನೆಗೆ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ, ಕುಟುಂಬಿಕರಿಗೆ ಸಾಂತ್ವಾನ – http://kundapraa.com/?p=15152
► ಮೃತ ಮಕ್ಕಳ ಗೌರವಾರ್ಥ ಹೆಮ್ಮಾಡಿಯಲ್ಲಿ ಸ್ವಯಂಪ್ರೇರಿತ ಬಂದ್ – http://kundapraa.com/?p=15148
ಶಾಲಾ ಮಕ್ಕಳ ಓಮ್ನಿ-ಬಸ್ ನಡುವೆ ಭೀಕರ ಅಫಘಾತ. 8 ಮಕ್ಕಳ ದಾರುಣ ಸಾವು – http://kundapraa.com/?p=15116

 

Exit mobile version