Site icon Kundapra.com ಕುಂದಾಪ್ರ ಡಾಟ್ ಕಾಂ

ಎಮ್.ಟೆಕ್‌ನಲ್ಲಿ ಸ್ವಾತಿ. ಬಿ. ಶೆಟ್ಟಿಗೆ 3ನೇ ರ‍್ಯಾಂಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ೨೦೧೭ರ ಜುಲೈನಲ್ಲಿ ನಡೆಸಿದ ಸ್ನಾತಕೋತ್ತರ ಪರೀಕ್ಷೆಯ ಎಮ್.ಟೆಕ್ ಕಂಪ್ಯೂಟರ್ ಸಾಯನ್ಸ್ ವಿಭಾಗದಲ್ಲಿ ಆರ್.ಎನ್.ಎಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾದ ಬೈಂದೂರಿನ ಸ್ವಾತಿ. ಬಿ. ಶೆಟ್ಟಿ 3ನೇ ರ‍್ಯಾಂಕ್ ಪಡೆದಿರುತ್ತಾರೆ.

ಪ್ರಸ್ತತ ಇವರು ಕಾಲೇಜಿನ ಕ್ಯಾಂಪಸ್ ಆಯ್ಕೆಯ ಮೂಲಕ ಬೆಂಗಳೂರಿನ ಪ್ರತಿಷ್ಠಿತ IBM ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೈಂದೂರಿನ ಶ್ರೀ ಮಂಜುನಾಥ ಮೆಡಿಕಲ್ಸ್‌ನ ಮಾಲೀಕರಾದ ಮಂಜುನಾಥ ಶೆಟ್ಟಿ ಮತ್ತು ನಾಗರತ್ನ ಎಮ್. ಶೆಟ್ಟಿಯವರ ಪುತ್ರಿ.

 

Exit mobile version