Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ ಸ್ವಾವಲಂಬನಾ ಕೇಂದ್ರದ ಮಹಿಳೆಯರಿಂದ ಸಿದ್ಧಗೊಳ್ಳುತ್ತಿದೆ ಬಟ್ಟೆಯ ಮಾಸ್ಕ್‌ಗಳು

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಎಲ್ಲಡೆ ಲಾಕ್‌ಡೌನ್ ಜಾರಿಯಾಗಿ ಕೊರೋನಾ ವಿರುದ್ಧ ಹೋರಾಟಕ್ಕಿಳಿದ ಸಂದರ್ಭ ವಂಡ್ಸೆ ಗ್ರಾಮ ಪಂಚಾಯತಿಯ ಸ್ವಾವಲಂಬನಾ ಕೇಂದ್ರದ ಮಹಿಳೆಯರೂ ಇದಕ್ಕೆ ಸಾಥ್ ನೀಡಿದ್ದಲ್ಲದೇ ಸಾವಿರಾರು ಬಟ್ಟೆಯ ಮಾಸ್ಕ್‌ಗಳನ್ನು ತಯಾರಿಸಿ ಆದಾಯಕ್ಕೊಂದು ದಾರಿ ಕಂಡುಕೊಂಡಿದ್ದರು.

ಲಾಕ್‌ಡೌನ್ ಘೊಷಣೆಯ ಬಳಿಕ ದೇವಸ್ಥಾನಗಳಿಗೆ ಸಾರ್ವಜನಿಕ ದರ್ಶನ ರದ್ದಾಗಿದ್ದರಿಂದ ವಂಡ್ಸೆ ಸ್ವಾವಲಂಭನಾ ಕೇಂದ್ರದಲ್ಲಿ ತಯಾರಾಗುತ್ತಿದ್ದ ಬಟ್ಟೆ ಚೀಲದ ಬೇಡಿಕೆ ಕುಸಿದಿತ್ತು. ಮಹಿಳೆಯರು ಕೆಲಸವಿಲ್ಲದೆ ಖಾಲಿ ಕೂತಿದ್ದರು. ಮಾಸ್ಕ್ ಸಿದ್ಧಪಡಿಸಿವುದು ಸೂಕ್ತ ಆಯ್ಕೆ ಎಂಬುದನ್ನು ಅರಿತ ಮಹಿಳೆಯರು ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಗಮನ ಸೆಳೆದಿದ್ದರು. ಅವರು ಜಿಲ್ಲಾಡಳಿತದ ಜೊತೆ ಮಾತನಾಡಿ ಮಾಸ್ಕ್ ಸಿದ್ದಪಡಿಸುವ ಜವಾಬ್ದಾರಿ ಪಡೆದಿದ್ದು, ಇದೂವರೆಗೆ  15,000ಕ್ಕೂ ಹೆಚ್ಚು ಕಾಟನ್ ಮಾಸ್ಕ್‌ಗಳನ್ನು ಸಿದ್ದಪಡಿಸಿ ಅಗತ್ಯವಿರುವೆಡೆಗೆ ನೀಡಿದ್ದಾರೆ. ಮಹಿಳೆಯರು ಸಾಮಾಜಿಕ ಅಂತರ ಪಾಲಿಸಿಕೊಂಡು ಸ್ವಾವಲಂಬನಾ ಕೇಂದ್ರದಲ್ಲಿ ಹಾಗೂ ತಮ್ಮ ಮನೆಯಲ್ಲಿಯೇ ಮಾಸ್ಕ್‌ನ ತಯಾರಿಸಿದ್ದರು. ಮಾಸ್ಕ್ ಸಿದ್ದ ಪಡಿಸುವ ಮೂಲಕ ಕರೋನಾ ವಾರಿಯರ‍್ಸ್ ಕೆಲಸ ನಿಭಾಯಿಸುವ ಜೊತೆ ತಮ್ಮ ಆರ್ಥಿಕ ಆಧಾರಕ್ಕೂ ದಾರಿ ಮಾಡಿಕೊಂಡಿದ್ದಾರೆ. ಮರುಬಳಕೆ ಮಾಡಬಹುದಾದ ಮಾಸ್ಕ್‌ಗೆ 15 ರೂ. ಬೆಲೆ ನಿಗದಿಪಡಿಸಲಾಗಿದೆ. ಮಾಸ್ಕ್ ಸಿದ್ದಪಡಿಸಿದವರಿಗೆ 5 ರೂ. ನೀಡುತ್ತಿದ್ದು, ಒಬ್ಬೊಬ್ಬರು ನೂರಕ್ಕೂ ಮಿಕ್ಕಿ ಮಾಸ್ಕ್ ಹೊಲಿಯುತ್ತಾರೆ.

ಕುಂದಾಪುರ ತಾಲೂಕು ವಂಡ್ಸೆ ಗ್ರಾಮ ಪಂಚಾಯಿತಿ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಸ್ವಾವಲಂಬಿ ಜೀವನ ನಡೆಸುವುದಕ್ಕಾಗಿ ಮಹಿಳಾ ಸ್ವಾವಲಂಬನಾ ಕೇಂದ್ರ 2018ರಲ್ಲಿ ಆರಂಭವಾಗಿದ್ದು, ಈಗಾಗಲೇ ಎರಡು ಬ್ಯಾಚ್ ಮೂಲಕ 100 ಮಹಿಳೆಯರು ಹೊಲಿಗೆ ತರಬೇತಿ ಪಡೆದಿದ್ದಾರೆ. ಕೇಂದ್ರದ ಮೂಲಕ ತರಬೇತಿ ಪಡೆದ ಮಹಿಳೆಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ವಂಡ್ಸೆ ಗ್ರಾಮ ಪಂಚಾಯಿತಿ ದೇವಸ್ಥಾಗಳ ಪ್ರಸಾದ ವಿತರಣೆ ಬಟ್ಟೆ ಚೀಲ ಹೊಲಿಯುವ ಕೆಲಸ ವಹಿಸಿಕೊಂಡು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ದಾರಿ ಮಾಡಿಕೊಟ್ಟಿತ್ತು.

 

ಇದನ್ನೂ ಓದಿ:
► ಕುಂದಾಪುರ ವಿಧಾನಸಭೆ ಕ್ಷೇತ್ರದ ಕ್ವಾರಂಟೈನ್ ಮಾಹಿತಿ-ದೂರಿಗಾಗಿ ಕಂಟ್ರೋಲ್ ರೂಂ – https://kundapraa.com/?p=37760 .
► ಕುಂದಾಪುರದಲ್ಲಿ120 ಬೆಡ್‌ಗಳ ಕೋವಿಡ್-19 ಆಸ್ಪತ್ರೆ ಸಜ್ಜು – https://kundapraa.com/?p=37752 .

Exit mobile version