Kundapra.com ಕುಂದಾಪ್ರ ಡಾಟ್ ಕಾಂ

ಕಾನನದ ನಡುವೆ ಸಿದ್ದಿ ಕ್ಷೇತ್ರ: ತಾಯ್ನಾಡು ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ದಲಿಂಗೇಶ್ವರ ಸನ್ನಿಧಿಯಲ್ಲಿ ಶಿವರಾತ್ರಿ ಸಂಭ್ರಮ

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು: ತಾಲೂಕಿನ ಗೋಳಿಹೊಳೆ ಗ್ರಾಮದ ತಾಯ್ನಾಡು ಎಂಬಲ್ಲಿ ಕಾನನದ ನಡುವೆ ಕಿರು ನದಿಯ ತಟದಲ್ಲಿನ ಗುಹೆಯೊಳಕ್ಕೆ ನೆಲೆನಿಂತಿರುವ ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ದಲಿಂಗೇಶ್ವರ ಸನ್ನಿಧಿಯಲ್ಲಿ ಶಿವರಾತ್ರಿಯ ಸಂಭ್ರಮ ಮನೆಮಾಡಿತ್ತು. ಸಿದ್ಧಿ ಪುರುಷರು ಆರಾಧಿಸಲ್ಪಟ್ಟ ತಪೋಭೂಮಿ ಎಂಬ ಐತಿಹ್ಯವುಳ್ಳ ಕ್ಷೇತ್ರವು ಇತ್ತಿಚಿನ ದಿನಗಳಲ್ಲಿ ಪ್ರಸಿದ್ದಿಗೆ ಬರುತ್ತಿದ್ದು, ಶಿವರಾತ್ರಿಯಂದು ಸುತ್ತಲಿನ ಊರುಗಳ ಜನರು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

ಶಿವರಾತ್ರಿಯ ಅಂಗವಾಗಿ ದೇವಳದಲ್ಲಿ ಗಣಹೋಮ, ದುರ್ಗಾಹೋಮ, ರುದ್ರಾಭಿಷೇಕ, ಪರಿವಾರ ದೇವರುಗಳ ಪೂಜೆ, ಭಜನಾ ಕಾರ್ಯಕ್ರ ಹಾಗೂ ಅನ್ನಸಂತರ್ಪಣೆ ವಿಶೇಷವಾಗಿ ಜರುಗಿದವು.

ಶಿವರಾತ್ರಿಯ ಮುನ್ನಾದಿನ ನಾಗಸರ್ಪವೊಂದು ಭಕ್ತರಿಗೆ ಗೋಚರಿಸಿ ಮತ್ತೆ ಅದೇ ಗುಹೆಯೊಳ್ಳಕ್ಕೆ ತೆರಳಿದ್ದು ದೇವರ ಪವಾಡವೇ ಸರಿ ಎನ್ನಲಾಗುತ್ತಿದೆ. ದೇವರ ಸಾನಿಧ್ಯದಲ್ಲಿಯೇ ಸರ್ಪ ಕಾಣಿಸಿಕೊಂಡಿರುವುದು ಸ್ಥಳದ ಮಹಿಮೆ ಎನ್ನಲಾಗುತ್ತಿದೆ.

ಐತಿಹ್ಯ:
ಗೊಳಿಹೊಳೆ ಗ್ರಾಮದ ತಾಯ್ನಾಡು ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ದಲಿಂಗೇಶ್ವರ ಸನ್ನಿಧಿಯು ಸಹಸ್ರ ವರ್ಷಗಳಿಂದ ಸಿದ್ಧರು, ಯೋಗಿಗಳು ಹಾಗೂ ತಪಸ್ವಿಗಳಿಂದ ಆರಾಧಿಸಲ್ಪಷ್ಟ ತಪೋಭೂಮಿಯೆಸಿಕೊಂಡಿದೆ. ನದಿಯ ತಟದಲ್ಲಿನ ಗುಹೆಯೊಳ್ಳಕ್ಕೆ ಇರುವ ಸಾನಿಧ್ಯದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಲಿಂಗವಿದ್ದು, ಅದರಲ್ಲಿಯೇ ಶ್ರೀ ಅಮೃತೇಶ್ವರಿ ತಾಯಿಯ ಸಾನಿಧ್ಯವೂ ಇದೆ ಎನ್ನಲಾಗಿದೆ. ಕಾರಣಾಂತರಗಳಿಂದ ಭಕ್ತರ ಅವಗಣನೆಗೆ ಬಾರದೇ ಗುಪ್ತವಾಗಿ ಉಳಿದ ಸನ್ನಿಧಾನವು ಇತ್ತಿಚಿನ ವರ್ಷಗಳಿಂದ ಗೋಚರಿಸಲ್ಪಷ್ಟು ಭಕ್ತರಿಂದ ಪೂಜಿಸಲ್ಪಡುತ್ತಿದೆ. ಕ್ಷೇತ್ರದ ಭಕ್ತರಿಗೆ ವಿವಿಧ ಪವಾಡಗಳಾಗಿರುವ ಅನುಭವವೂ ಆಗಿದೆ ಎನ್ನುತ್ತಾರೆ.

ನದಿಯ ತಟದಲ್ಲಿ ಕೆಳಭಾಗದಲ್ಲಿ ಗುಹೆಯಲ್ಲಿ ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ಇತ್ತಿಚಿಗೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಜೈನ ಕುಟುಂಬಸ್ಥರು ಹಾಗೂ ಜಯರಾಮ ಪೂಜಾರಿಯವರ ಕುಟುಂಬಸ್ಥರು ಇಲ್ಲಿನ ಆಡಳಿತ ನೋಡಿಕೊಂಡು ಬರುತ್ತಿದ್ದಾರೆ. ದೇವಳಕ್ಕೆ ಬರುವ ಭಕ್ತರಿಂದ ಸೇವೆಗಳಿಗೆ ನಿಗದಿತ ಮೊತ್ತವನ್ನು ನಿಗದಿಪಡಿಸಬಾರದು ಎಂಬ ದೇವರ ವಾಕ್ಯವಾಗಿರುವುದರಿಂದ ಭಕ್ತರ ಶಕ್ತಿಯನುಸಾರ ಸೇವೆ ಸಲ್ಲಿಸುತ್ತಾರೆ.

ಇದನ್ನೂ ಓದಿ:
► ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=45936 .

► ಕುಂದಾಪುರ: ಶ್ರೀ ಕುಂದೇಶ್ವರನ ಸ್ಮರಿಸಿ ಕೃತಾರ್ಥರಾದ ಭಕ್ತರು – https://kundapraa.com/?p=45940 .

► ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=45932 .

► ವಣಕೊಡ್ಲುವಿನಲ್ಲಿ ಶಿವಲಿಂಗ ಸ್ವರ್ಶಿಸಿ ಪುನೀತರಾದ ಭಕ್ತರು – https://kundapraa.com/?p=45943 .
.
► ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=45955 .

Exit mobile version