ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಪ್ರಾಚೀನ ದೇವಾಲಯಗಳಲ್ಲಿ ಒಂದೆನಿಸಿರುವ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ಪೂಜೆ, ಶಿವನಾಮ ಸ್ಮರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ದೇವರಿಗೆ ರುದ್ರಾಭಿಷೇಕ – ಜಲಾಭಿಷೇಕ – ಕ್ಷೀರಾಭಿಷೇಕ – ಬಿಲ್ವಾರ್ಚನೆ-ನಂದಾದೀಪ, ಶಿವರಾತ್ರಿಯ ಅರ್ಘ್ಯಪ್ರದಾನ – ಇತ್ಯಾದಿ ಪೂಜೆಗಳನ್ನು ನಡೆದವು. ದೇವರ ದೀಪಕ್ಕೆ ಎಣ್ಣೆ ತಂದವರು ಅದನ್ನು ಉರಿಯುತ್ತಿರುವ ದೀಪದ ಸುರಿದು ದೇವರಿಗೆ ನಮಿಸುವುದು ಕಂಡುಬಂತು. ದೇವಾಲಯದ ಬಯಲು ರಂಗಮಂಟಪದಲ್ಲಿ ಭಜನಾ ಕಾರ್ಯಕ್ರಮ ಜರುಗಿತು. ರಾತ್ರಿ ಕಾಲದಲ್ಲಿ ಕುಂದೇಶ್ವರನ ಸನ್ನಿಧಿಯಲ್ಲಿ ನಡೆಯುವ ರಂಗಪೂಜೆ ಮತ್ತು ಮಹಾಮಂಗಳಾರತಿಯಲ್ಲಿ ಭಕ್ತಾದಿಗಳೆಲ್ಲ ಭಾಗವಹಿಸಿ, ಮಂತ್ರ ಪುಷ್ಪ ಸಮರ್ಪಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ.