Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ಸಪ್ತಪದಿ ತುಳಿದ ವಿಕ್ರಾಂತ್ ರೋಣ ಖ್ಯಾತಿಯ ನಟಿ ನೀತಾ ಅಶೋಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ,ಜು.10:
ವಿಕ್ರಾಂತ್ ರೋಣ ಸಿನಿಮಾ ಖ್ಯಾತಿಯ ನಟಿ ನೀತಾ ಅಶೋಕ್ ತನ್ನ ಕಾಲೇಜು ಗೆಳೆಯನ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ನೀತಾ ಅಶೋಕ್ ಹಾಗೂ ಸತೀಶ್ ಮೇಸ್ತ ಜೋಡಿಯ ನಿಶ್ಚಿತಾರ್ಥ ಇತ್ತೀಚೆಗೆ ನಡೆದಿತ್ತು.

ಕುಂದಾಪುರ ಕೋಟದ ನೀತಾ ಅಶೋಕ್ ಎಂಬಿಎ ಪದವೀಧರರು. ನಟಿ ನೀತಾ ಅಶೋಕ್ ಹಾಗೂ ಸತೀಶ್ಕಾಲೇಜು ಸ್ನೇಹಿತರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇಂದು ತನ್ನ ಹುಟ್ಟೂರು ಕೋಟದ ಸಮೀಪದ ಸಾಲಿಗ್ರಾಮದ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಅವರು ಹಸೆಮಣೆ ಏರಿದ್ದಾರೆ.

ಯಶೋದೆ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ನೀತಾ ಅಶೋಕ್, ಮುಂದೆ ನಾ ನಿನ್ನ ಬಿಡಲಾರೆ, ಆಶಿಯಾನ್, ನೀಲಾಂಬರಿ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ತುಳು ಚಿತ್ರರಂಗದಲ್ಲಿ ಜಬರ್ದಸ್ತ್ ಶಂಕರ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದರು. ವಿಕ್ರಾಂತ್ ರೋಣ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹಿಂದಿ ಧಾರಾವಾಹಿಗಳಲ್ಲಿಯೂ ನೀತಾ ಕಾಣಿಸಿಕೊಂಡಿದ್ದರು.

Exit mobile version