Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಬಾರ್ ಎದುರು ಹೊಡೆದಾಟ, ವಾಹನ ಗಾಜು ಪುಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ವಾಹನಕ್ಕೆ ಅಡ್ಡ ಬಂದ ಕಾರಣಕ್ಕೆ ಆರಂಭವಾದ ಮಾತು ಪರಸ್ಪರ ಹಲ್ಲೆ, ವಾಹನ ಜಖಂಗೊಳಿಸುವುದರಲ್ಲಿ ಅಂತ್ಯವಾಗಿದ್ದು ದೂರು ಪ್ರತಿದೂರು ದಾಖಲಾಗಿದೆ.

https://youtu.be/dQ5h4VsdUZ0
Watch Video

ಘಟನೆಯ ವಿವರ:
ಉಪ್ಪುಂದದ ರಮೇಶ್ ದೇವಾಡಿಗ ಎಂಬುವವರು, ಟಾಟಾ ಏಸ್ ವಾಹನದಲ್ಲಿ ತನ್ನ ಸ್ನೇಹಿತ ರವಿ ಎಂಬುವವರೊಂದಿಗೆ ಪ್ಲೈವುಡ್ ತರಲು ಉಪ್ಪುಂದದಿಂದ ಬೈಂದೂರಿನ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಮನೀಶ್ ಬಾರ್ & ರೆಸ್ಟೊರೆಂಟ್ ಮುಂದೆ ನಿಖಿಲೇಶ್, ನಿತೇಶ್, ಹಾಗೂ ಕಿಶೋರ್ ಎಂಬುವವರು ವಿರುದ್ಧ ದಿಕ್ಕಿನಲ್ಲಿ ಬಂದು ಟಾಟಾ ಏಸ್ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ಪಕ್ಕದಲ್ಲಿ ಕುಳಿತಿದ್ದ ರವಿಯ ಕುತ್ತಿಗೆಗೆ ಕೈಹಾಕಿ ಕತ್ತನ್ನು ಹಿಸುಕಲು ಪ್ರಯತ್ನಿಸಿದ್ದು ಆಗ ಸ್ಥಳಿಯರು ಗಲಾಟೆಯನ್ನು ಬಿಡಿಸಿ ಕಳುಹಿಸಿದ್ದಾರೆ.

ರಮೇಶ್ ದೇವಾಡಿಗ ತಮ್ಮ ಕೆಲಸವನ್ನು ಮುಗಿಸಿಕೊಂಡು ಸಂಜೆ 5 ಗಂಟೆ ವೇಳೆಗೆ ಶೆಟ್ಟಿ ಬಾರ್ & ರೆಸ್ಟೊರೆಂಟ್ ಪಕ್ಕದಲ್ಲಿದ್ದ ಟೀ ಸ್ಟಾಲ್ ನಲ್ಲಿ ಟೀ ಕುಡಿಯಲು ವಾಹನವನ್ನು ನಿಲ್ಲಿಸಿದ್ದ ಸಂದರ್ಭ ನಿಖಿಲೇಶ್, ನಿತೇಶ್, ಕಿಶೋರ್ , ಪ್ರಜ್ವಲ್ ಶೆಟ್ಟಿ ಹಾಗೂ ಮಣಿಕಂಠ ಎಂಬುವವರು ಎರಡು ಬೈಕಿನಲ್ಲಿ ಬಂದಿದ್ದಾರೆ. ಈ ವೇಳೆ ಟಾಟ ಏಸ್ ವಾಹನದಲ್ಲಿದ್ದ ರಮೇಶ್ ದೇವಾಡಿಗ ಹಾಗೂ ರವಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಟಾಟಾ ಏಸ್ ವಾಹನದ ಮುಂಭಾಗದ ಗ್ಲಾಸನ್ನು ಹೆಲ್ಮೇಟ್ ಹಾಗೂ ಸೋಡಾ ಬಾಟಲಿನಿಂದ ಹೊಡೆದು ಜಖಂಗೊಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿದೂರು:
ಶಿರೂರಿನ ಕೃಷ್ಣ ಶೆಟ್ಟಿ ಎಂಬಾತ ತನ್ನ ಸ್ನೇಹಿತರಾದ ಮಣಿಕಂಠ ಹಾಗೂ ಪ್ರಜ್ವಲ್ ಶೆಟ್ಟಿಯೊಂದಿಗೆ ಬೈಂದೂರು ಶೆಟ್ಟಿ ಬಾರ್ ಬಳಿ ನಿಂತುಕೊಂಡಿದ್ದಾಗ ಆರೋಪಿ ರಮೇಶ್ ದೇವಾಡಿಗ ಹಾಗೂ ರವಿ ಪೂಜಾರಿ ಎಂಬವರು ಟಾಟಾ ಏಸ್ ವಾಹನದಲ್ಲಿ ಶೆಟ್ಟಿ ಬಾರ್ ಬಳಿ ಬಂದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿದೂರು ದಾಖಲಾಗಿದೆ.

Exit mobile version