ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೂನ್ 10ರಂದು ಗಂಗೊಳ್ಳಿಯ ಪೆರಾಜೆ ಬಾರಿನ ಸಮೀಪ ರಸ್ತೆಯ ಬದಿಯಲ್ಲಿದ್ದ ಬೀದಿ ದನವನ್ನು ಕಳವು ಮಾಡಿ ಕಾರಿನಲ್ಲಿ ತುಂಬಿಕೊಂಡು ತೆರಳಿದ್ದ ಆರೋಪದ ಮೇಲೆ, ಇಂದು ಕಾಪುವಿನಲ್ಲಿ ಆಪಾದಿತ ಮೊಹಮ್ಮದ್ ಹನೀಫ್ ಎಂಬುವವನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಜೂನ್ 10ರಂದು ಖಾಸಗಿ ಪ್ಯಾಸೆಂಜರ್ ವಾಹನದಲ್ಲಿ ತೆರಳಿದ್ದ ಮೂವರು ಆಗಂತುಕರು ಗಂಗೊಳ್ಳಿ ಬಂದರು ರಸ್ತೆ ಬಾರ್ ಎದುರು ರಾತ್ರಿ ಹೊತ್ತಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗೋವನ್ನು ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದರು. ಈ ಘಟನೆಗೂ ಮೊದಲು ಮ್ಯಾಂಗನೀಸ್ ರಸ್ತೆಯಲ್ಲಿ ಗೋಕಳ್ಳತನ ಮಾಡಲು ಯತ್ನಿಸಿದ್ದು, ಸ್ಥಳೀಯರು ಕೂಗಿಕೊಂಡಿದ್ದರಿಂದ ದನವನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಗಂಗೊಳ್ಳಿ ಪೊಲಿಸ್ ಠಾಣಾ ಪಿ.ಎಸ್.ಐ ಭೀಮಾಶಂಕರ ಸಿನ್ನೂರ ಸಂಗಣ್ಣ ಹಾಗೂ ಸಿಬ್ಬಂದಿಗಳಾದ ಶ್ರೀಧರ, ಚಂದ್ರಶೇಖರ, ಪ್ರಿನ್ಸ್ , ಸಂತೋಷ್. ಆರ್ ಡಿ ಸೆಲ್ ವಿಭಾಗದ ಶಿವಾನಂದ ಎಂಬುವವರು ಆರೋಪಿ ಪತ್ತೆಯ ಬಗ್ಗೆ ಮಾಹಿತಿ ಕಲೆ ಹಾಕಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸಿಸಿ ಟಿವಿ ಪೂಟೇಜ್ ಆಧಾರ ಮೇಲೆ ಕಳ್ಳತನ ನಡೆಸಿರುವ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು. ಈ ಬಗ್ಗೆ ಗಂಗೊಳ್ಳಿಯ ಹಿಂದೂ ಜಾಗರಣಾ ವೇದಿಕೆ ಒಂದು ಪ್ರತ್ಯೇಕ ದೂರು ದಾಖಲಿಸಿತ್ತು.
ಇದನ್ನೂ ಓದಿ:
► ಗಂಗೊಳ್ಳಿಯಲ್ಲಿ 2 ಕಡೆ ಗೋಕಳ್ಳತನಕ್ಕೆ ಯತ್ನ. ಒಂದು ಗೋವು ಕಳವು – https://kundapraa.com/?p=38510 .
► ಬೈಂದೂರು ಠಾಣೆಯ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢ – https://kundapraa.com/?p=38799 .
► ಕೆರೆಗೆ ಬಿದ್ದ ಕಾರು: ವಕ್ವಾಡಿಯ ಉದ್ಯಮಿ ಮೃತ, ಮಹಿಳೆ ಗಂಭೀರ – https://kundapraa.com/?p=38842 .