Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಡ್ರೈವಿಂಗ್ ವೇಳೆ ಹೃದಯಾಘಾತದಿಂದ ಲಾರಿ ಚಾಲಕ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಮಂಗಳೂರಿನಿಂದ ಬಳ್ಳಾರಿಗೆ ಕಲ್ಲಿದ್ದಲು ತುಂಬಿಸಿಕೊಂಡು ಸಾಗುತ್ತಿದ್ದ ಲಾರಿಯ ಚಾಲಕ ಮಂಗಳೂರಿನ ವಿಶ್ರಾಂತ್ (29) ಎದೆನೋವಿನಿಂದ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ.

ನಡುರಾತ್ರಿ 12.30ಗಂಟೆ ಸುಮಾರಿಗೆ ತಾಲೂಕಿನ ಅಂಪಾರು ಗ್ರಾಮದ ನೆಲ್ಲಿಕಟ್ಟೆ ಸಮೀಪ ಅವರು ಹೋಗುತ್ತಿರುವಾಗ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಲಾರಿಯಲ್ಲಿದ್ದ ಸ್ನೇಹಿತ ನಾಗೇಂದ್ರ ಕೂಡಲೆ ಲಾರಿ ನಿಲ್ಲಿಸಿ 108 ಅಂಬ್ಯುಲೆನ್ಸ್‌ ಗೆ ಕರೆ ಮಾಡಿ ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Exit mobile version