ಅಕ್ರಮ ಗಣಿಗಾರಿಕೆ – ಸಾಗಾಟ: 4 ಲಾರಿ ಸಹಿತ 8 ಮೆಟ್ರಿಕ್ ಟನ್ ಮರಳು, 14 ಮೆಟ್ರಿಕ್ ಟನ್ ಕೆಂಪುಕಲ್ಲು ವಶಕ್ಕೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.04:
ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಎರಡು ಕಡೆಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿ ಸಂಧ್ಯಾ ಅವರು ದಾಳಿ ನಡೆಸಿ 4 ಲಾರಿ ಸಹಿತ, 8 ಮೆಟ್ರಿಕ್ ಟನ್ ಮರಳು, 14 ಮೆಟ್ರಿಕ್ ಟನ್ ಕೆಂಪುಕಲ್ಲು ವಶಕ್ಕೆ ಪಡೆದಿದ್ದಾರೆ.

Call us

Click Here

ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮದ ಬಟ್ಟೆಕುದ್ರು ಪರಿಸರದ ಚಕ್ರ ನದಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ ಸಾಗಾಣಿಕೆ ನಡೆಸುತ್ತಿರುವ ಬಗ್ಗೆ ರಾತ್ರಿ ಬಂದ ಸಾರ್ವಜನಿಕರ ಮಾಹಿತಿ ಮೇರೆಗೆ ಇಲಾಖೆಯ ಭೂ ವಿಜ್ಞಾನಿ ಸಂಧ್ಯಾ ಅವರು ಮುಂಜಾನೆ 5.30ಕ್ಕೆ ದಾಳಿ ನಡೆಸಿ 8 ಮೆಟ್ರಿಕ್ ಟನ್ ಮರಳು ಸಹಿತ ಒಂದು ಲಾರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇನ್ನೂಂದು ಪ್ರಕರಣದಲ್ಲಿ ಸಾರ್ವಜನಿಕರ ಮಾಹಿತಿ ಮೇರೆಗೆ ಕುಂದಾಪುರ ತಾಲೂಕು ಆಲೂರು ಗ್ರಾಮದಲ್ಲಿನ ಅನಧಿಕೃತ ಕೆಂಪುಕಲ್ಲು ಕ್ವಾರಿಗಳಿಂದ ಕೆಂಪು ಕಲ್ಲು ಸಾಗಣೆ ಮಾಡುತ್ತಿದ್ದ ಮೂರು ಲಾರಿ ಮತ್ತು 14 ಮೆಟ್ರಿಕ್ ಟನ್ ಕೆಂಪುಕಲ್ಲುಗಳನ್ನು ಹೊಸಾಡು ಗ್ರಾಮದ ಬಂಟ್ವಾಡಿ ಪರಿಸರದಲ್ಲಿ ಬೆಳಗ್ಗೆ 8 ಗಂಟೆಗೆ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಚಾಲಕ ಯೋಗೇಶ್ವರ್ ಶೆಟ್ಟಿಗಾರ್ ಸಹಕರಿಸುತ್ತಾರೆ. ಭೂವಿಜ್ಞಾನಿ ಯವರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ವಹಿಸುವ ವರೆಗೆ ಖನಿಜ ಸಹಿತ ವಶಪಡಿಸಿಕೊಂಡಿರುವ ನಾಲ್ಕು ವಾಹನಗಳನ್ನು ಗಂಗೊಳ್ಳಿ ಪೊಲೀಸ್ ಠಾಣೆ ಸುಪರ್ದಿಯಲ್ಲಿ ಇರಿಸಲಾಗಿದೆ.

Leave a Reply