Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಸ್ತಾನದಲ್ಲಿ ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಮ್ಯಾರಥ್ಯಾನ್ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ: ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕ ಮತ್ತು ಮಾಲಕರು ಸಾಸ್ತಾನ ಮತ್ತು ಚೇತನಾ ಸ್ಪ್ರೀಂಟರ್ಸ್ ಪಾಂಡೇಶ್ವರ ಇವರ ಸಹಯೋಗದೊಂದಿಗೆ ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಮ್ಯಾರಥ್ಯಾನ್ ಕಾರ್ಯಕ್ರಮ ಸಾಸ್ತಾನ ಬಸ್ ನಿಲ್ದಾಣದ ಹತ್ತಿರ ಇತ್ತೀಚಿಗೆ ಜರಗಿತು.

ಕಾರ್ಯಕ್ರಮವು ಸಾಸ್ತಾನದಿಂದ ಆರಂಭಗೊಂಡ ಪಾಂಡೇಶ್ವರ ಮೂಲಕ ಬೆಣ್ಣೆಕುದ್ರು ಬಾರಕೂರು ಮೂಲಕ ಮರಳಿ ಸಾಸ್ತಾನಕ್ಕೆ ತಲುಪಲಾಯಿತು.

ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಪಟು ಕೋಟ ದಿನೇಶ್ ಗಾಣಿಗ ಹಾಗೂ ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಸಾಸ್ತಾನ ಸಿಎ ಬ್ಯಾಂಕ್ ನಿರ್ದೇಶಕಿ ಲಿಲಾವತಿ ಗಂಗಾಧರ್, ಉದ್ಯಮಿ ಅನ್ವರ್ ಮಟಪಾಡಿ, ರಾಷ್ಟ್ರೀಯ ಕ್ರೀಡಾಪಟು ವಿಠ್ಠಲ್ ಶೆಟ್ಟಿಗಾರ್, ಅನ್ನೋನ್ಯತಾ ಗೂಡ್ಸ್, ವಾಹನ ಚಾಲಕ ಮತ್ತು ಮಾಲಕರು ಸಾಸ್ತಾನ ಇದರ ಅಧ್ಯಕ್ಷ ಸಂಜೀವ ಪೂಜಾರಿ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ರೋಟರಿ ಕ್ಲಬ್ ಹಂಗಾರಕಟ್ಟೆ ಸಸ್ತಾನ ಇದರ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕ ರಜಾಕ್ ಗುಂಡ್ಮಿ ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮವನ್ನು ರಾಷ್ಟ್ರೀಯ ಕ್ರೀಡಾಪಟು ಗಣೇಶ್ ಪಾಂಡೇಶ್ವರ ಸಂಯೋಜಿಸಿದರು.

ಈ ಮ್ಯಾರಥ್ಯಾನಲ್ಲಿ ಪುರುಷರು ಮತ್ತು ಮಹಿಳೆಯರು ಮತ್ತು ಮಕ್ಕಳು , ಹಿರಿಯ ಕ್ರೀಡಾಪಟುಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಿದ್ದು ಆಯ್ಕೆಗೊಂಡ ಕ್ರೀಡಾಳುಗಳಿಗೆ  ಬಹುಮಾನ ನೀಡಲಾಯಿತು.

Exit mobile version