Kundapra.com ಕುಂದಾಪ್ರ ಡಾಟ್ ಕಾಂ

ಸಾಸ್ತಾನದಲ್ಲಿ ಕುಕ್ಕೆ ದೇಗುಲದ ಬೆಳ್ಳಿ ರಥಕ್ಕೆ ಭವ್ಯ ಸ್ವಾಗತ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಸಮ್ಮುಖದಲ್ಲಿ ಕುಂಭಾಶಿಯಿಂದ ಹೊರಟ ಕುಕ್ಕೆ ದೇಗುಲದ ಬೆಳ್ಳಿ ರಥವನ್ನು ಸಾಸ್ತಾನದ ನಾಗರಿಕರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಸಾಸ್ತಾನದ ಭಾಗದ ನಾಗರಿಕರು ಬೆಳ್ಳಿ ರಥಕ್ಕೆ ಪುಷ್ಭಾರ್ಚನೆ ಗೈದರು.

ಈ ಸಂದರ್ಭದಲ್ಲಿ ಕುಕ್ಕೆ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಹರೀಷ್ ಇಂಜಾಡಿ, ಸಾಸ್ತಾನ ಭಾಗದ ನಾಗರಿಕರಾದ ಐರೋಡಿ ವಿಠ್ಠಲ್ ಪೂಜಾರಿ, ಸುರೇಶ್ ಕುಂದರ್, ಶಂಕರ್ ಕುಲಾಲ್, ಸಂಜೀವ ಪೂಜಾರಿ, ರಾಘವೇಂದ್ರ ಮಡಿವಾಳ, ಸುರೇಶ್ ಶೆಟ್ಟಿ, ಉಲ್ಲಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Exit mobile version