ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಸಮ್ಮುಖದಲ್ಲಿ ಕುಂಭಾಶಿಯಿಂದ ಹೊರಟ ಕುಕ್ಕೆ ದೇಗುಲದ ಬೆಳ್ಳಿ ರಥವನ್ನು ಸಾಸ್ತಾನದ ನಾಗರಿಕರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಸಾಸ್ತಾನದ ಭಾಗದ ನಾಗರಿಕರು ಬೆಳ್ಳಿ ರಥಕ್ಕೆ ಪುಷ್ಭಾರ್ಚನೆ ಗೈದರು.

ಈ ಸಂದರ್ಭದಲ್ಲಿ ಕುಕ್ಕೆ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಹರೀಷ್ ಇಂಜಾಡಿ, ಸಾಸ್ತಾನ ಭಾಗದ ನಾಗರಿಕರಾದ ಐರೋಡಿ ವಿಠ್ಠಲ್ ಪೂಜಾರಿ, ಸುರೇಶ್ ಕುಂದರ್, ಶಂಕರ್ ಕುಲಾಲ್, ಸಂಜೀವ ಪೂಜಾರಿ, ರಾಘವೇಂದ್ರ ಮಡಿವಾಳ, ಸುರೇಶ್ ಶೆಟ್ಟಿ, ಉಲ್ಲಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.










