ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಚೆನ್ನೈನಲ್ಲಿ ನಡೆದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ರೆಕಾರ್ಡ್ ಕ್ರಿಯೇಟ್‌ಗೈದ ಉಡುಪಿ ಜಿಲ್ಲೆಯ ಕೋಟದ ಗಿಳಿಯಾರಿನ ಕರಾಟೆ ತರಬೇತುದಾರ ಮಂಜುನಾಥ ಮೊಗವೀರ ಅವರನ್ನು ಬೆಂಗಳೂರಿನಲ್ಲಿ ಆದಿತ್ಯವಾರ ಜೆ.ಪಿ.ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಪ್ರಶಸ್ತಿ ಪ್ರದಾನಗೈದು ಪುರಸ್ಕರಿಸಲಾಯಿತು

ಬೆಂಗಳೊರಿನ ನೈಋತ್ಯ ವಿಭಾಗದ ಡೆಪ್ಯೂಟಿ ಕಮಿಷನರ್ ಅನಿತಾ ಬಿ. ಹದ್ದನ್ನವರ್ (ಐ.ಪಿ.ಎಸ್) ಹಾಗೂ ಬಿಬಿಎಂಪಿ ಬೆಂಗಳೂರು ಇದರ ಮಾಜಿ ಮಹಾಪೌರರಾದ ಎನ್. ಶಾಂತಕುಮಾರಿ ಉಪಸ್ಥಿತರಿದ್ದರು.