ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಇತಿಹಾಸ ಪ್ರಸಿದ್ಧ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಹಾಲು ಹಬ್ಬ ಗೆಂಡೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.
ದೇಗುಲದಲ್ಲಿ ನೆರದಿದ್ದ ಸಾವಿರಾರು ಭಕ್ತಾಧಿಗಳು ಹರಕೆ ರೂಪದಲ್ಲಿ ಗೆಂಡೋತ್ಸವ ಕಾರ್ಯದಲ್ಲಿ ಭಾಗಿಯಾದರು. ದೇವಿ ಅಮೃತೇಶ್ವರೀಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ರೂಪದಲ್ಲಿ ತಾಯಿಯನ್ನು ಸಂದರ್ಶಿಸಿ ಶ್ರೀನಾಗದೇವರಿಗೆ ಹಾಲಿಟ್ಟು ಸೇವೆ ಸಮರ್ಪಿಸಿ ಪಾತ್ರಿವರ್ಗ ಗೆಂಡವನ್ನು ಸ್ಪರ್ಶಿಸಿ ನಂತರ ಭಕ್ತಾಧಿಗಳು ಹರಕೆ ಸಂದಾಯಗೊಳಿಸಿಕೊಂಡರು.
ದೇಗುಲದ ಅರ್ಚಕ ವರ್ಗ ಜೋಗಿ ಸಮುದಾಯ ಈ ಕೈಂಕರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್, ಮಂಡಳಿಯ ಸದಸ್ಯರಾದ ರತನ್ ಐತಾಳ್, ಸುಭಾಶ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಶಿವ ಪೂಜಾರಿ, ಜ್ಯೋತಿ ಡಿ. ಕಾಂಚನ್, ಸುಧಾ ಎ. ಪೂಜಾರಿ, ಚಂದ್ರ ಆಚಾರ್, ಸುಬ್ರಾಯ ಜೋಗಿ ಮತ್ತು ಮಾಜಿ ಟ್ರಸ್ಟಿಗಳು, ಗ್ರಾಮದ ಪ್ರಮುಖರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ವಿದ್ಯುಕ್ತವಾಗಿ ಸಂಪನ್ನಗೊಂಡಿತು.
ರಾತ್ರಿ ಮಹಾಅನ್ನಸಂತರ್ಪಣೆ ಸಾವಿರಾರು ಭಕ್ತಾಧಿಗಳು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು. ವಿವಿಧ ಸಂಘ ಸಂಸ್ಥೆಗಳು ಗೆಂಡೋತ್ಸವ ಸ್ವಯಂ ಸೇವಕರಾಗಿ ಪಾಲ್ಗೊಂಡರು. ಗೆಂಡದ ಧಾರ್ಮಿಕ ಕಾರ್ಯವನ್ನು ಶಂಕರ್ ಆಚಾರ್, ನರಸಿಂಹ ಆಚಾರ್, ಬಾಬುರಾಯ ಆಚಾರ್, ಮಂಜುನಾಥ್ ಆಚಾರ್ ನೆರವೇರಿಸಿದರು.
ಅದೇ ದಿನ ರಾತ್ರಿ ಹಾಲು ಹಬ್ಬ ಗೆಂಡೋತ್ಸವ ಪೂರ್ಣಗೊಳಿಸಿಕೊಂಡರೇ, ಭಾನುವಾರ ಪೂರ್ವಾಹ್ನ ಢಕ್ಕೆ ಬಲಿ ಹಾಗೂ ತುಲಾಭಾರ ಸೇವಾ ಕಾರ್ಯಕ್ರಮಗಳು ಜರಗಿದವು.
ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದೇಗುಲಕ್ಕೆ ಆಗಮಿಸಿ ಸರದಿ ಸಾಲಿನಲ್ಲಿ ಶ್ರೀದೇವಿಯ ದರ್ಶನ ಪಡೆದುಕೊಂಡರು. ದೇವಿಯನ್ನು ವಿಶೇಷ ಪುಷ್ಭಗಳಿಂದ ಶೃಂಗರಿಸಲಾಗಿತ್ತು. ದೇಗುಲದ ಸರತಿ ಅರ್ಚಕ ಕೃಷ್ಣ ಜೋಗಿ ಭಕ್ತರ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೆರಿಸಿದರು.
ತುಲಾಭಾರ ಸೇವೆಯ ಅಂಗವಾಗಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಸಮ್ಮುಖದಲ್ಲಿ ವೇ.ಮೂ ಸುಬ್ರಹ್ಮಣ್ಯ ಅಡಿಗ ಧಾರ್ಮಿಕ ವಿಧಿವಿಧಾನಗಳಂತೆ ದರ್ಶನ ಪಾತ್ರಿಗಳಾದ ಕೋರ್ಗಿ ಸುರೇಶ್ ಜೋಗಿ, ಉದಯ ಜೋಗಿ ಕೋಟ ರಾಷ್ಟ್ರೀಯ ಹೆದ್ದಾರಿವರೆಗೆ ನೆರದಿದ್ದ ಭಕ್ತರೊಂದಿಗೆ ಸಂಚರಿಸಿ ಪುಷ್ಭ ಪ್ರಸಾದವನ್ನು ವಿವಿಧ ದಿಕ್ಕಿನಲ್ಲಿ ಇರಿಸಿದರು.
ಸುಮಾರು ಮುನ್ನೂರಕ್ಕೂ ಅಧಿಕ ತುಲಾಭಾರ ಸೇವಾರ್ಥಿಗಳು ತಮ್ಮ ಹರಕೆಯನ್ನು ತಾಯಿಗೆ ಸಮರ್ಪಿಸಿದರು.
ದೇಗುಲದ ಟ್ರಸ್ಟಿಗಳಾದ ಶಿವ ಪೂಜಾರಿ, ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಸುಧಾ ಎ. ಪೂಜಾರಿ, ಜ್ಯೋತಿ ಡಿ ಕಾಂಚನ್, ಚಂದ್ರ ಆಚಾರ್, ಸುಬ್ರಾಯ ಜೋಗಿ, ರತನ್ ಐತಾಳ್, ಮಾಜಿ ಟ್ರಸ್ಟಿಗಳಾದ ಚಂದ್ರ ಪೂಜಾರಿ,ಸುಂದರ್ ಕಾರ್ಕಡ, ಸುಬ್ರಾಯ ಜೋಗಿ, ಸತೀಶ್ ಹೆಗ್ಡೆ, ಸುಶೀಲ ಸೋಮಶೇಖರ್, ಸ್ಥಳೀಯರಾದ ದೇವದಾಸ ಕಾಂಚನ್, ಭುಜಂಗ ಗುರಿಕಾರ, ಶೇವಧಿ ಸುರೇಶ್ ಗಾಣಿಗ, ರವೀಂದ್ರ ಜೋಗಿ, ದೇಗುಲದ ಅರ್ಚಕರಾದ ರೂಪೇಶ್ ಜೋಗಿ, ಅಮೃತ್ ಜೋಗಿ, ದಾಮೋದರ ಜೋಗಿ, ಗಣೇಶ್ ಜೋಗಿ, ಸಂತೋಷ್ ಜೋಗಿ, ಅಶ್ವಥ್ ಜೋಗಿ ಸೇರಿದಂತೆ ಹಲವರಾರು ಮಂದಿ ಉಪಸ್ಥಿತರಿದ್ದರು.
ಅಪರಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.