Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೋಟ ಅಮೃತೇಶ್ವರೀ ದೇಗುಲದ ವಾರ್ಷಿಕ ಗೆಂಡೋತ್ಸವ ಸಂಪನ್ನ
    ಊರ್ಮನೆ ಸಮಾಚಾರ

    ಕೋಟ ಅಮೃತೇಶ್ವರೀ ದೇಗುಲದ ವಾರ್ಷಿಕ ಗೆಂಡೋತ್ಸವ ಸಂಪನ್ನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಇಲ್ಲಿನ ಇತಿಹಾಸ ಪ್ರಸಿದ್ಧ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಹಾಲು ಹಬ್ಬ ಗೆಂಡೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.

    Click Here

    Call us

    Click Here

    ದೇಗುಲದಲ್ಲಿ ನೆರದಿದ್ದ ಸಾವಿರಾರು ಭಕ್ತಾಧಿಗಳು ಹರಕೆ ರೂಪದಲ್ಲಿ ಗೆಂಡೋತ್ಸವ ಕಾರ್ಯದಲ್ಲಿ ಭಾಗಿಯಾದರು. ದೇವಿ ಅಮೃತೇಶ್ವರೀಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ರೂಪದಲ್ಲಿ ತಾಯಿಯನ್ನು ಸಂದರ್ಶಿಸಿ ಶ್ರೀನಾಗದೇವರಿಗೆ ಹಾಲಿಟ್ಟು ಸೇವೆ ಸಮರ್ಪಿಸಿ ಪಾತ್ರಿವರ್ಗ ಗೆಂಡವನ್ನು ಸ್ಪರ್ಶಿಸಿ ನಂತರ ಭಕ್ತಾಧಿಗಳು ಹರಕೆ ಸಂದಾಯಗೊಳಿಸಿಕೊಂಡರು.

    ದೇಗುಲದ ಅರ್ಚಕ ವರ್ಗ ಜೋಗಿ ಸಮುದಾಯ ಈ ಕೈಂಕರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

    ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್, ಮಂಡಳಿಯ ಸದಸ್ಯರಾದ ರತನ್ ಐತಾಳ್, ಸುಭಾಶ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಶಿವ ಪೂಜಾರಿ, ಜ್ಯೋತಿ ಡಿ. ಕಾಂಚನ್, ಸುಧಾ ಎ. ಪೂಜಾರಿ, ಚಂದ್ರ ಆಚಾರ್, ಸುಬ್ರಾಯ ಜೋಗಿ ಮತ್ತು ಮಾಜಿ ಟ್ರಸ್ಟಿಗಳು, ಗ್ರಾಮದ ಪ್ರಮುಖರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ವಿದ್ಯುಕ್ತವಾಗಿ ಸಂಪನ್ನಗೊಂಡಿತು.

    ರಾತ್ರಿ ಮಹಾಅನ್ನಸಂತರ್ಪಣೆ ಸಾವಿರಾರು ಭಕ್ತಾಧಿಗಳು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು. ವಿವಿಧ ಸಂಘ ಸಂಸ್ಥೆಗಳು ಗೆಂಡೋತ್ಸವ ಸ್ವಯಂ ಸೇವಕರಾಗಿ ಪಾಲ್ಗೊಂಡರು. ಗೆಂಡದ ಧಾರ್ಮಿಕ ಕಾರ್ಯವನ್ನು ಶಂಕರ್ ಆಚಾರ್, ನರಸಿಂಹ ಆಚಾರ್, ಬಾಬುರಾಯ ಆಚಾರ್, ಮಂಜುನಾಥ್ ಆಚಾರ್ ನೆರವೇರಿಸಿದರು.

    Click here

    Click here

    Click here

    Call us

    Call us

    ಅದೇ ದಿನ ರಾತ್ರಿ ಹಾಲು ಹಬ್ಬ ಗೆಂಡೋತ್ಸವ ಪೂರ್ಣಗೊಳಿಸಿಕೊಂಡರೇ, ಭಾನುವಾರ ಪೂರ್ವಾಹ್ನ ಢಕ್ಕೆ ಬಲಿ ಹಾಗೂ ತುಲಾಭಾರ ಸೇವಾ  ಕಾರ್ಯಕ್ರಮಗಳು ಜರಗಿದವು.

    ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದೇಗುಲಕ್ಕೆ ಆಗಮಿಸಿ ಸರದಿ ಸಾಲಿನಲ್ಲಿ ಶ್ರೀದೇವಿಯ ದರ್ಶನ ಪಡೆದುಕೊಂಡರು. ದೇವಿಯನ್ನು ವಿಶೇಷ ಪುಷ್ಭಗಳಿಂದ ಶೃಂಗರಿಸಲಾಗಿತ್ತು. ದೇಗುಲದ ಸರತಿ ಅರ್ಚಕ ಕೃಷ್ಣ ಜೋಗಿ ಭಕ್ತರ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೆರಿಸಿದರು.

    ತುಲಾಭಾರ ಸೇವೆಯ ಅಂಗವಾಗಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಸಮ್ಮುಖದಲ್ಲಿ ವೇ.ಮೂ ಸುಬ್ರಹ್ಮಣ್ಯ ಅಡಿಗ ಧಾರ್ಮಿಕ ವಿಧಿವಿಧಾನಗಳಂತೆ  ದರ್ಶನ ಪಾತ್ರಿಗಳಾದ ಕೋರ್ಗಿ ಸುರೇಶ್ ಜೋಗಿ, ಉದಯ ಜೋಗಿ ಕೋಟ ರಾಷ್ಟ್ರೀಯ ಹೆದ್ದಾರಿವರೆಗೆ ನೆರದಿದ್ದ ಭಕ್ತರೊಂದಿಗೆ ಸಂಚರಿಸಿ ಪುಷ್ಭ ಪ್ರಸಾದವನ್ನು ವಿವಿಧ ದಿಕ್ಕಿನಲ್ಲಿ ಇರಿಸಿದರು.

    ಸುಮಾರು ಮುನ್ನೂರಕ್ಕೂ ಅಧಿಕ ತುಲಾಭಾರ ಸೇವಾರ್ಥಿಗಳು ತಮ್ಮ ಹರಕೆಯನ್ನು ತಾಯಿಗೆ ಸಮರ್ಪಿಸಿದರು.

    ದೇಗುಲದ ಟ್ರಸ್ಟಿಗಳಾದ ಶಿವ ಪೂಜಾರಿ, ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಸುಧಾ ಎ. ಪೂಜಾರಿ, ಜ್ಯೋತಿ ಡಿ ಕಾಂಚನ್, ಚಂದ್ರ ಆಚಾರ್, ಸುಬ್ರಾಯ ಜೋಗಿ, ರತನ್ ಐತಾಳ್, ಮಾಜಿ ಟ್ರಸ್ಟಿಗಳಾದ ಚಂದ್ರ ಪೂಜಾರಿ,ಸುಂದರ್ ಕಾರ್ಕಡ, ಸುಬ್ರಾಯ ಜೋಗಿ, ಸತೀಶ್ ಹೆಗ್ಡೆ, ಸುಶೀಲ ಸೋಮಶೇಖರ್, ಸ್ಥಳೀಯರಾದ ದೇವದಾಸ ಕಾಂಚನ್, ಭುಜಂಗ ಗುರಿಕಾರ, ಶೇವಧಿ ಸುರೇಶ್ ಗಾಣಿಗ, ರವೀಂದ್ರ ಜೋಗಿ, ದೇಗುಲದ ಅರ್ಚಕರಾದ ರೂಪೇಶ್ ಜೋಗಿ, ಅಮೃತ್ ಜೋಗಿ, ದಾಮೋದರ ಜೋಗಿ, ಗಣೇಶ್ ಜೋಗಿ, ಸಂತೋಷ್ ಜೋಗಿ, ಅಶ್ವಥ್ ಜೋಗಿ  ಸೇರಿದಂತೆ ಹಲವರಾರು ಮಂದಿ ಉಪಸ್ಥಿತರಿದ್ದರು.

    ಅಪರಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಬ್ರಹ್ಮಾವರ: ಮಟಪಾಡಿ ದಿ. ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯಸ್ಮರಣೆ

    04/02/2026

    ತ್ರಾಸಿ: ವಾಕಿಂಗ್‌ ವೇಳೆ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದುಕೊಂಡು ಪರಾರಿಯಾದ ಕಳ್ಳ

    04/02/2026

    ಸಾಲಿಗ್ರಾಮದಲ್ಲಿ ಬೃಹತ್ ಹಿಂದೂ ಸಂಗಮ, ಶೋಭಾಯಾತ್ರೆ

    04/02/2026
    Leave A Reply Cancel Reply

    16 − two =

    Call us

    Click Here

    Call us

    Call us

    Call us
    Highest Viewed Recently
    • ಬ್ರಹ್ಮಾವರ: ಮಟಪಾಡಿ ದಿ. ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯಸ್ಮರಣೆ
    • ಜೀವನದಲ್ಲಿ ಉಚ್ಚ ಆದರ್ಶಗಳನ್ನು ಮತ್ತು ಉನ್ನತ ಗುರಿಯನ್ನಿಟ್ಟುಕೊಳ್ಳಿ: ಸ್ವಾಮಿ ಯುಗೇಶಾನಂದ
    • 70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಕಾಲೇಜಿನ ಬಾಲಕಿಯರು ಚಾಂಪಿಯನ್ಸ್
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ
    • ತ್ರಾಸಿ: ವಾಕಿಂಗ್‌ ವೇಳೆ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದುಕೊಂಡು ಪರಾರಿಯಾದ ಕಳ್ಳ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.