Kundapra.com ಕುಂದಾಪ್ರ ಡಾಟ್ ಕಾಂ

ಅಂಪಾರು ಮನೆಯಲ್ಲಿ ಕಳ್ಳತನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಅಂಪಾರು ಗ್ರಾಮದ ಅಕ್ಕಯ್ಯ ಅವರ ಮನೆಯಲ್ಲಿ ಕಳ್ಳರು ಅ. 10ರಿಂದ 21ರ ಮಧ್ಯೆ ಕಳ್ಳತನವಾದ ಘಟನೆಯ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಕಯ್ಯ ಅವರು ತಮ್ಮ ಮಗಳೊಂದಿಗೆ ಅ. 10ರಂದು ಮನೆಯಿಂದ ಹೋರ ಹೋದವರು, ಅ. 21ರಂದು ಮನೆಗೆ ವಾಪಸು ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕಳ್ಳರು ಮನೆಯ ಎದುರಿನ ಬೀಗ ಒಡೆದು ಒಳ ನುಗ್ಗಿದ್ದಾರೆ. ಮನೆಯ ಎದುರು ಕೋಣೆಯಲ್ಲಿದ್ದ 5 ದೇವರ ಕಾಣಿಕೆ ಡಬ್ಬಿಯಲ್ಲಿನ ಕಾಣಿಕೆ, 2 ಮೊಬೈಲು ಮತ್ತು ಚಾರ್ಜರನ್ನು ಕಳ್ಳತನ ಮಾಡಿದ್ದಾರೆ. ಮತ್ತೊಂದು ಕೋಣೆಯ ಕಬ್ಬಿಣದ ಕಪಾಟಿನ ಲಾಕ್ ಅನ್ನು ಮುರಿದು ಹಾನಿಕೊಳ್ಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Exit mobile version