ನಾವುಂದ: ಮೂರು ಮನೆಗಳಲ್ಲಿ ಸರಣಿ ಕಳ್ಳತನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪುರ ತಾಲೂಕು ನಾವುಂದ ಗ್ರಾಮದ ಕಾಲೇಜಿನ ಹಿಂಬದಿಯ ನಾಲ್ಕು ಮನೆಗಳಿಗೆ ಕಳ್ಳರು ನುಗ್ಗಿದ್ದು ಅದರಲ್ಲಿ ಮೂರು ಮನೆಗಳಲ್ಲಿ ಯಾವುದೇ ವಸ್ತುಗಳು ಕಳ್ಳರ ಪಾಲಾಗದೇ ಬೈತುಲ್ ಫಿರ್ದೋಸ್ ಎಂಬುವರ ಮನೆಯಲ್ಲಿ ಮಾತ್ರ ಚಿನ್ನಾಭರಣ ಕಳವಾದ ಘಟನೆ ನಡೆದಿದೆ.
ಭಾನುವಾರ ಫಿರ್ದೋಸ್ ಮನೆಯವರು ಹೊರಗೆ ಹೋಗಿದ್ದು, ಸೋಮವಾರ ಬೆಳಿಗ್ಗೆ ಮನೆಗೆ ಹಿಂತಿರುದಾಗ ಮನೆಯ ಮುಖ್ಯ ದ್ವಾರವನ್ನು ಯಾರೋ ಹಾನಿಗೊಳಿಸಿರುವುದನ್ನು ಕಂಡು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಬೈಂದೂರು ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಹಾಗೂ ಸಿಬ್ಬಂದಿಗಳು ಒಳಗಡೆ ಹೋಗಿ ನೋಡಿದಾಗ ಮನೆಯ ಮಾಸ್ಟರ್ ಬೆಡ್‌ರೂಂ ಮಂಚದ ಮೇಲ್ಭಾಗವನ್ನು ತೆರೆದು ಅದರಲ್ಲಿದ್ದ ಸುಮಾರು ರೂ.೨ ಲಕ್ಷ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿರುವುದು ಕಂಡುಬಂದಿದೆ.
ಈ ಪ್ರಕರಣ ಸಂಬಂಧ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕಾಗಮಿಸಿದ ಅಡಿಶನಲ್ ಎಸ್ಪಿ ವಿಷ್ಣುವರ್ಧನ್, ವೃತ್ತ ನಿರೀಕ್ಷಕ ರಾಘವ ಎಸ್. ಪಡೀಲ್ ಮರ್ಗದರ್ಶನದಲ್ಲಿ ತನಿಖೆ ಚುರುಕುಗೊಂಡಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಒಟ್ಟಿನಲ್ಲಿ ಈ ಸರಣಿ ಕಳ್ಳತನ ಘಟನೆ ಪರಿಸರದವರ ನಿದ್ದೆ ಕೆಡಿಸಿದೆ.

Call us

Click Here

Leave a Reply