ಕಟ್ಕೆರೆ ಕಾಳಿಕಾಂಬಾ ದೇವಸ್ಥಾನದಲ್ಲಿ ಕಳ್ಳತನ. ಭಾರಿ ಕಳವು ತಪ್ಪಿಸಿದ ಸೇಫ್ ಕುಂದಾಪುರ ಪ್ರಾಜೆಕ್ಟ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜೂ.2: ಬುಧವಾರ ರಾತ್ರಿ ಕೋಟೇಶ್ವರ ಸಮೀಪದ ಕಟ್ಕರೆಯ ಪ್ರಸಿದ್ಧ ಮಹಾದೇವಿ ಕಾಳಿಕಾಂಬಾ ಅಮ್ಮನವರ ದೇವಸ್ಥಾನಕ್ಕೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಹಾನಿ ಮಾಡಿರುವ ಘಟನೆ ನಡೆದಿದ್ದು, ಸೇಫ್ ಕುಂದಾಪುರ ಪ್ರಾಜೆಕ್ಟ್ ಸಿಬ್ಬಂದಿಯ ಸಮಯ ಪ್ರಜ್ನೆಯಿಂದ ತಪ್ಪಿದ ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿದ್ದ ಕಳ್ಳತನ ತಪ್ಪಿದೆ.

Call us

Click Here

ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು ದೇವಸ್ಥಾನದ ಒಳಗಿನ ದೇವಿ ಮೂರ್ತಿಯ ಕೈಯಲ್ಲಿದ್ದ ಬೆಳ್ಳಿಯ ಖಡ್ಗ, ಪರಶು ಹಾಗೂ ಸಿ.ಸಿ ಟಿವಿ ಡಿವಿಆರ್, ಹಾರ್ಡ್ ಡಿಸ್ಕ್ ಕೂಡ ಕದ್ದೊಯ್ದಿದ್ದಾರೆ. ಬಾಗಿಲಿಗೆ ಅಳವಡಿಸಿದ ಬೆಳ್ಳಿ ಲೇಪನವನ್ನು ಕಿತ್ತು ತೆಗೆಯಲು ಯತ್ನಿಸಿದ್ದಾರೆ.

ಕಳವಾದ ಬೆಳ್ಳಿ ಆಭರಣಗಳ ಒಟ್ಟು ಮೌಲ್ಯ ರೂ. 25,000 ಆಗಿದ್ದು ಕಳ್ಳತನದ ವೇಳೆ 1.5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಗೈದಿದ್ದಾರೆ. ಕಳೆದ ಆರು ವರ್ಷಗಳ ಹಿಂದೆಯೂ ಇದೇ ದೇವಸ್ಥಾನದಲ್ಲಿ 10ಲಕ್ಷಕ್ಕೂ ಅಧಿಕ ನಗ-ನಗದು ಕಳವಾಗಿತ್ತು.

ಸೇಪ್ ಕುಂದಾಪುರ ಪ್ರಾಜೆಕ್ಟ್‌ನಿಂದ ತಪ್ಪಿದ ಭಾರಿ ಮೌಲ್ಯದ ವಸ್ತುಗಳ  ಕಳವು:
ದೇವಸ್ಥಾನದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಕಳ್ಳತನ ನಡೆಯುದರಲ್ಲಿತ್ತು. ಆದರೆ ಸೈನ್ ಇನ್ ಸೆಕ್ಯೂರಿಟಿಯವರ ಸೇಫ್ ಕುಂದಾಪುರ ಪ್ರಾಜೆಕ್ಟ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಈ ದೊಡ್ಡ ಪ್ರಮಾಣದ ಕಳ್ಳತನ ವಿಫಲವಾಗಿದೆ. ರಾತ್ರಿ 1:27ರ ಹೊತ್ತಿಗೆ ಸಿಸಿ ಟಿವಿ ಕ್ಯಾಮರಾ ಬಂದ್ ಆಗಿದ್ದು ಇದನ್ನು ಗಮನಿಸುತ್ತಿದ್ದ ಸೇಪ್ ಕುಂದಾಪುರ ಪ್ರಾಜೆಕ್ಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬೀಟ್ ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದಾರೆ. ಸೇಫ್ ಕುಂದಾಪುರ ಪ್ರಾಜೆಕ್ಟ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬಾರೀ ಕಳ್ಳತನ ತಪ್ಪಿದಂತಾಗಿದೆ.

ಘಟನಾ ಸ್ಥಳಕ್ಕೆ ಎಎಸ್ಪಿ ಹರಿರಾಂ ಶಂಕರ್, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕುಂದಾಪುರದ ಪಿಎಸೈ ಹರೀಶ್ ಆರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Click here

Click here

Click here

Click Here

Call us

Call us

Leave a Reply